ಆಧಾರ್ ಕಾರ್ಡ್ ಈಗ ಎಲ್ಲ ಕೆಲಸಗಳಿಗೂ ಅನಿವಾರ್ಯ ಎನ್ನುವಂತಾಗಿದೆ. ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಕೆಲವರು ಇನ್ನೂ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲ. ಮತ್ತೆ ಕೆಲವರ ಮೊಬೈಲ್ ನಂಬರ್ ಬದಲಾಗಿದ್ದು, ಹೊಸ ನಂಬರ್ ಲಿಂಕ್ ಮಾಡಬೇಕಾಗುತ್ತದೆ. ಗ್ರಾಹಕರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ಮೊಬೈಲ್ ನಂಬರ್, ಆಧಾರ್ ಜೊತೆ ಲಿಂಕ್ ಆಗಿಲ್ಲವೆಂದ್ರೂ ನೀವು ಮನೆಯಲ್ಲೇ ಕುಳಿತು ಪಿವಿಸಿ ಆಧಾರ್ ಕಾರ್ಡ್ ಗೆ ಆರ್ಡರ್ ಮಾಡಬಹುದು.
ಕೇವಲ 50 ರೂಪಾಯಿಗೆ ಸ್ಪೀಡ್ ಪೋಸ್ಟ್ ಮೂಲಕ ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡಬಹುದು. ಪಿವಿಸಿ ಆಧಾರ್ ಕಾರ್ಡನ್ನು, ಎಟಿಎಂ ಕಾರ್ಡ್, ಕಚೇರಿ ಕಾರ್ಡ್ ನಂತೆ ಪರ್ಸ್ ನಲ್ಲಿ ಇಟ್ಟುಕೊಂಡು ಹೋಗಬಹುದು.ಇದಕ್ಕೆ ಸಾಕಷ್ಟು ಭದ್ರತೆ ವೈಶಿಷ್ಟ್ಯವಿದೆ.
ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡಲು ನೀವು ಮೊದಲು ಸ್ಮಾರ್ಟ್ಫೋನ್, ಕಂಪ್ಯೂಟರ್ ಅಥವಾ ಜಿಯೋ ಫೋನ್ ನಲ್ಲಿ ಬ್ರೌಸರ್ ಓಪನ್ ಮಾಡಬೇಕು. https://residentpvc.uidai.gov.in/order-pvcreprint ಗೆ ಹೋಗಬೇಕು. ಅಲ್ಲಿ ಲಾಗಿನ್ ಆಧಾರ್ ಕಾರ್ಡ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಆಧಾರ್ ಸಂಖ್ಯೆ ನಮೂದಿಸಬೇಕು. ಅದ್ರ ಕೆಳಗೆ ಸೆಕ್ಯೂರಿಟಿ ಕೋಡ್ ಬರೆಯಲು ಕೇಳಲಾಗುತ್ತದೆ. ಅದರ ಕೆಳಗೆ ಮೊಬೈಲ್ ನಂಬರ್ ನೊಂದಾಯಿಸಿಲ್ಲ ಎಂಬ ಆಯ್ಕೆ ಕಾಣುತ್ತದೆ. ನಿಮ್ಮ ಬಳಿ ನೋಂದಾಯಿತ ಮೊಬೈಲ್ ನಂಬರ್ ಇಲ್ಲವೆಂದಾದ್ರೆ ಮಾತ್ರ ಅದರ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಮೊಬೈಲ್ ನಂಬರ್ ಹಾಕಿ, ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು. ನೀವು ನಮೂದಿಸಿದ ನಂಬರ್ ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿದ ನಂತ್ರ ಹಣ ಪಾವತಿಗೆ ಕೇಳಲಾಗುತ್ತದೆ. 50 ರೂಪಾಯಿ ಪಾವತಿಸಿದ ನಂತ್ರ ಒಂದು ವಾರದಲ್ಲಿ ನಿಮಗೆ ಪಿವಿಸಿ ಆಧಾರ್ ಕಾರ್ಡ್ ಸಿಗಲಿದೆ.