
ಕಚ್ಚಾ ಬಾದಾಮ್ ಹಾಡು ಇನ್ಸ್ಟಾಗ್ರಾಮ್ ನಲ್ಲಿ ಅತಿ ದೊಡ್ಡ ಹಿಟ್ ಸೃಷ್ಟಿಸಿತು. ವಿಭಿನ್ನವಾದ ಬೀಟ್ಸ್ ಹಾಗೂ ಹುಕ್ ಸ್ಟೆಪ್ ಗಳಿಂದ ಈ ಟ್ರೆಂಡ್ ಎಲ್ಲೆಡೆ ವೈರಲ್ ಆಯಿತು. ಈ ಟ್ರೆಂಡ್ ಶುರುವಾಗಿ ತಿಂಗಳುಗಳೆ ಕಳೆದ್ರು, ಈಗಲೂ ಸದ್ದು ಮಾಡುತ್ತಿದೆ. ಇನ್ಸ್ಟಾಗ್ರಾಮ್ ತಾರೆಯರಿಂದ ಹಿಡಿದು, ಸಿನಿತಾರೆಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಈಗ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸರದಿ.
ಹೌದು, ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಕಚ್ಚಾ ಬಾದಾಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಳದಿ ಬಣ್ಣದ ಉಡುಗೆ ತೊಟ್ಟು ಮುದ್ದಾಗಿ ಕಾಣುತ್ತಿರುವ ಸಿಂಧು ಮೊದಲು ಕಚ್ಚಾ ಬಾದಾಮ್ ಹಾಡಿನ ಹುಕ್ ಸ್ಟೆಪ್ ಫಾಲೋ ಮಾಡಿದ್ರು, ಕಡೆಯಲ್ಲಿ ತಮ್ಮ ಸ್ವಂತ ಟಚ್ ನೀಡಿದ್ದಾರೆ. ಪಿ.ವಿ. ಸಿಂಧು ಈ ವಿಡಿಯೋಗೆ ಎರಡು ಹಳದಿ ಹೃದಯಗಳ ಕ್ಯಾಪ್ಷನ್ ನೀಡಿ, ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಏಕಾಂಗಿಯಾಗಿ ಉಕ್ರೇನ್ ಗಡಿ ದಾಟಿದ 11 ವರ್ಷದ ಬಾಲಕ….!
ಅಪ್ಲೋಡ್ ಆದ ಕೆಲವು ಗಂಟೆಗಳಲ್ಲೆ ಈ ವಿಡಿಯೋ ಸಖತ್ ರೆಸ್ಪಾನ್ಸ್ ದೊರೆತಿದೆ. ಹಲವು ಕಾಮೆಂಟ್‌ಗಳು ವ್ಯಕ್ತವಾಗಿದೆ. ಅಪ್ಲೋಡ್ ಆದ 16 ಗಂಟೆಯಲ್ಲಿ 1.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಲೈಕ್ ಗಳ ಸುರಿಮಳೆಯಾಗುತ್ತಿದೆ, ವಿಡಿಯೋ ನೋಡಿದ ಹಲವರು ಪಿ.ವಿ.ಸಿಂಧು ಅವರ ಡ್ಯಾನ್ಸ್ ಟ್ಯಾಲೆಂಟ್ ಅನ್ನು ಹಾಡಿ ಹೊಗಳಿದ್ದಾರೆ.