ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಚೀನಾದ ಹಾನ್ ಯೂ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೇ 24ರ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-13, 14-21, 21-12 ಅಂತರದಲ್ಲಿ ಗೆದ್ದು ಈ ವರ್ಷ ಬಿಡಬ್ಲ್ಯೂಎಫ್ ಟೂರ್ನಲ್ಲಿ ಮೊದಲ ಸೆಮಿಫೈನಲ್ ಗೆ ಪ್ರವೇಶಿಸಿದ್ದರು.
ಸಿಂಧು ಈಗ ಸಿಂಗಾಪುರದ ಪುತ್ರಿ ಕುಸುಮಾ ವಾರ್ದಾನಿ ಮತ್ತು ಥೈಲ್ಯಾಂಡ್ನ ಬುಸಾನನ್ ಒಂಗ್ಬಮ್ರುಂಗ್ಫಾನ್ ನಡುವಿನ ಮತ್ತೊಂದು ಕ್ವಾರ್ಟರ್ ಫೈನಲ್ ವಿಜೇತರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್ನಲ್ಲಿ ಸಿಂಧು 21-13, 12-21, 21-14 ಅಂತರದಲ್ಲಿ ಕೊರಿಯಾದ ಸಿಮ್ ಯು ಜಿನ್ ಅವರನ್ನು ಸೋಲಿಸಿದರು.ವಿಶ್ವ ರ್ಯಾಂಕಿಂಗ್ನಲ್ಲಿ 15ನೇ ಸ್ಥಾನದಲ್ಲಿರುವ ಸಿಂಧು, 2022ರಲ್ಲಿ ಸಿಂಗಾಪುರ ಓಪನ್ ಗೆದ್ದ ಬಳಿಕ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ.