ಮಾಸ್ಕೋ: ಅಣ್ವಸ್ತ್ರ ದಾಳಿ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ರಷ್ಯಾ ಭದ್ರತಾ ಸಮಿತಿ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ಭದ್ರತಾ ಸಮಿತಿ ಕಾರ್ಯದರ್ಶಿ ಮೆಡ್ವೆಡೇವ್ ರಷ್ಯಾ ಭದ್ರತೆಗೆ ಬೆದರಿಕೆಯಾದರೆ ಅಣ್ವಸ್ತ್ರ ಬಳಸುತ್ತೇವೆ. ಯಾರ ಜೊತೆಯೂ ಸಮಾಲೋಚನೆ ನಡೆಸದೇ ಸೂಕ್ತ ಉತ್ತರ ನೀಡುತ್ತೇವೆ ಎಂದು ನ್ಯಾಟೋ ರಾಷ್ಟ್ರಗಳಿಗೆ ಮೆಡ್ವೆಡೇವ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ದೇಶದ ನಾಲ್ಕು ಪ್ರದೇಶಗಳನ್ನು ರಷ್ಯಾ ಆಕ್ರಮಿಸಿದ್ದು, ಆಕ್ರಮಿತ ಪ್ರದೇಶಗಳಲ್ಲಿ ಮತದಾನ ನಡೆಸಿತ್ತು. ಬಹುತೇಕ ಜನರು ರಷ್ಯಾ ಪರವಾಗಿ ಒಲವು ತೋರಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30 ರಂದು ಈ ಪ್ರದೇಶಗಳನ್ನು ರಷ್ಯಾ ದೇಶಕ್ಕೆ ಸೇರ್ಪಡೆ ಮಾಡಲಾಗುತ್ತದೆ.
ಶುಕ್ರವಾರ ಅಧಿಕೃತವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಈ ಪ್ರದೇಶಗಳನ್ನು ರಷ್ಯಾಗೆ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಘೋಷಣೆ ಮಾಡಲಿದ್ದಾರೆ.