ವಾಷಿಂಗ್ಟನ್: ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಷಣ ಮಾಡಿದ್ದು, ಉಕ್ರೇನ್ ಪರವಾಗಿ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ ನಡೆಸುತ್ತಿದೆ. ಪೂರ್ವನಿಯೋಜಿತ ಪ್ಲಾನ್ ಮಾಡಿಕೊಂಡು ಯುದ್ಧ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ನ್ಯಾಟೋ ದೇಶಗಳು ಪ್ರತಿಕ್ರಿಯೆ ನೀಡುವುದಿಲ್ಲವೆಂದು ರಷ್ಯಾ ಭಾವಿಸಿತ್ತು. ಅಮೆರಿಕ ವಾಯು ಪ್ರದೇಶದಲ್ಲಿ ರಷ್ಯಾ ವಿಮಾನಗಳಿಗೆ ಬ್ಯಾನ್ ಮಾಡಲಾಗಿದೆ. ಇಡೀ ವಿಶ್ವವೇ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ದೂರ ಇಟ್ಟಿದೆ. ರಷ್ಯಾ ವಿರುದ್ಧ ಉಕ್ರೇನ್ ಧೈರ್ಯವಾಗಿ ಯುದ್ಧ ಮಾಡುತ್ತಿದೆ. ನಾವು ಕ್ರೇನ್ ಪರವಾಗಿ ರಷ್ಯಾ ವಿರುದ್ಧ ಹೋರಾಡುವುದಿಲ್ಲ. ಆದರೆ, ಪರವಾಗಿ ಅಮೆರಿಕ ನಿಲ್ಲುತ್ತದೆ. ವ್ಲಾಡಿಮಿರ್ ಪುಟಿನ್ ರಷ್ಯಾದ ಸರ್ವಾಧಿಕಾರಿ ಆಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಟೀಕಿಸಿದ್ದಾರೆ.