ಬೆಂಗಳೂರಿನ ಜನಪ್ರಿಯ ಪುಟಾಣಿ ಎಕ್ಸ್ಪ್ರೆಸ್ ಮಾರ್ಚ್ 8 ರಿಂದ ಕಬ್ಬನ್ ಪಾರ್ಕ್ ನಲ್ಲಿ ಮರು ಪ್ರಾರಂಭಿಸಲು ಸಿದ್ಧವಾಗಿದೆ. ಪ್ರವಾಸಿಗರಿಗೆ ಸಂತೋಷದ ಸವಾರಿ ನೀಡಲು ಹೆಸರುವಾಸಿಯಾಗಿದ್ದ ಈ ಆಟಿಕೆ ರೈಲು 2019 ರಲ್ಲಿ ದುರಸ್ತಿ ಕಾರ್ಯಗಳಿಂದಾಗಿ ಸ್ಥಗಿತಗೊಂಡಿತ್ತು.
ನೈರುತ್ಯ ರೈಲ್ವೇ, ಇದೀಗ ಪುಟಾಣಿ ರೈಲಿನ ಆರಂಭವನ್ನು ಘೋಷಿಸಿದೆ. ಕಬ್ಬನ್ ಉದ್ಯಾನವನಕ್ಕೆ ಭೇಟಿ ನೀಡುವ ಮಕ್ಕಳು ಹಾಗೂ ಪ್ರವಾಸಿಗರಿಗೆ ಈ ರೈಲು ಅಚ್ಚುಮೆಚ್ಚಾಗಿತ್ತು.
ಅದರಲ್ಲಿ ಸವಾರಿ ಮಾಡುವುದು ಬೆಂಗಳೂರಿನ ಮಕ್ಕಳ ನೆಚ್ಚಿನ ವಾರಾಂತ್ಯದ ಚಟುವಟಿಕೆಗಳಲ್ಲಿ ಒಂದಾಗಿತ್ತು. ಆದಾಗ್ಯೂ, 2019 ರಲ್ಲಿ, ಟ್ರ್ಯಾಕ್ನಲ್ಲಿ ಆಗಿದ್ದ ಹಾನಿಯನ್ನು ಗಮನಿಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಅಗಲಗೊಳಿಸಲಾದ ಟ್ರ್ಯಾಕ್ಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ಕೆಲವು ಮರು-ಪೇಂಟಿಂಗ್ ಕೆಲಸಗಳು ಸಹ ಪ್ರಕ್ರಿಯೆಯಲ್ಲಿವೆ. ಶನಿವಾರದ ವೇಳೆಗೆ 900 ಮೀಟರ್ ಟ್ರ್ಯಾಕ್ ಸಿದ್ಧವಾಗಲಿದೆ. ಮರು ಉದ್ಘಾಟನೆಗೂ ಮುನ್ನ ನಾವು ಪ್ರಾಯೋಗಿಕ ಓಡಾಟಗಳನ್ನು ನಡೆಸುತ್ತೇವೆ ಎಂದು SWR ನ ಅಧಿಕಾರಿಯೊಬ್ಬರು ʼಟೈಮ್ಸ್ ಆಫ್ ಇಂಡಿಯಾʼ ಗೆ ತಿಳಿಸಿದ್ದಾರೆ.