ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ ಕೆಮ್ಮು-ನೆಗಡಿ ಎಲ್ಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಚಳಿಗಾಲದಲ್ಲಿ ಚರ್ಮ ಕಾಂತಿಯುತವಾಗಿ ಕಾಣಲಿ ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಅನೇಕ ಕ್ರೀಂಗಳನ್ನು ಜನರು ಬಳಸ್ತಾರೆ. ಆದ್ರೆ ಕ್ರೀಂ ಹಚ್ಚಿದ ಕೆಲ ಸಮಯ ಮಾತ್ರ ಚರ್ಮ ಹೊಳಪಿನಿಂದ ಕೂಡಿರುತ್ತದೆ. ಕೆಲ ಗಂಟೆ ನಂತ್ರ ಮತ್ತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಆದ್ರೆ ಮನೆಯಲ್ಲಿರುವ ಕೆಲ ಎಣ್ಣೆ, ಚರ್ಮ ಸದಾ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ತುಟಿ ಒಡೆಯುವುದನ್ನು ತಪ್ಪಿಸಲು ಹೊಕ್ಕಳಿಗೆ ಸಾಸಿವೆ ಎಣ್ಣೆಯನ್ನು ಹಾಕಿ. ಸಾಸಿವೆ ಎಣ್ಣೆಯಲ್ಲಿ ಒಮೆಗಾ-6, ವಿಟಮಿನ್ –ಇ ಇರುತ್ತದೆ. ಇದು ತುಟಿ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಒಡೆದ ತುಟಿ ಮೃದುವಾಗಲು ನೆರವಾಗುತ್ತದೆ.
ಬಾದಾಮಿ ಎಣ್ಣೆ ಚರ್ಮಕ್ಕೆ ಒಳ್ಳೆಯದು. ಇದು ಚರ್ಮ ಹೊಳಪು ಪಡೆದು ಮೃದುವಾಗಲು ನೆರವಾಗುತ್ತದೆ. ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಮೂರು ಹನಿ ಬಾದಾಮಿ ಎಣ್ಣೆಯನ್ನು ಹಾಕಿ.
ಮುಖದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿದ್ದರೆ ಬೇವಿನ ಎಣ್ಣೆಯನ್ನು ಬಳಸಿ. ಹೊಕ್ಕಳಿಗೆ ಬೇವಿನ ಎಣ್ಣೆಯನ್ನು ಹಾಕುವುದ್ರಿಂದ ಮುಖದ ಮೇಲಿನ ಗುಳ್ಳೆಗಳು ಮಾಯವಾಗುತ್ತವೆ.
ಚಳಿಗಾಲದಲ್ಲಿ ಚರ್ಮ ಒಡೆಯುವುದು ಮಾಮೂಲಿ. ಪಾದದ ಬಿರುಕು, ಕೈ ಚರ್ಮ ಒಡೆಯುವುದು ಸಾಮಾನ್ಯ. ರಾತ್ರಿ ಹೊಕ್ಕಳಿಗೆ ಬೆಣ್ಣೆ ಹಚ್ಚುತ್ತ ಬಂದಲ್ಲಿ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ.