ಪ್ರತಿ ನಿತ್ಯ ನಾವು ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಜಾಗೃತರಾಗ್ತಿದ್ದಾರೆ. ತೂಕ ಇಳಿಸಿಕೊಳ್ಳುವ, ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ನೀರು ಸೇವನೆ ಮಾಡಬೇಕು ಎಂಬುದು ಬಹುತೇಕರಿಗೆ ಗೊತ್ತು. ಆದ್ರೆ ಬಿಸಿ ನೀರಿಗೆ ಕಪ್ಪು ಉಪ್ಪು ಹಾಕಿ ಕುಡಿದ್ರೆ ಸಾಕಷ್ಟು ಲಾಭವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಕಪ್ಪು ಉಪ್ಪಿನಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಬಿಸಿ ನೀರಿಗೆ ಚಿಟಕಿ ಕಪ್ಪು ಉಪ್ಪು ಹಾಕಿ ಕುಡಿಯುವುದ್ರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ಕಪ್ಪು ಉಪ್ಪಿನಲ್ಲಿರುವ ಖನಿಜಗಳು ನರಮಂಡಲವನ್ನು ಶಾಂತಗೊಳಿಸುತ್ತದೆ. ಒತ್ತಡದ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಉತ್ತಮ ನಿದ್ರೆಗೆ ನೆರವಾಗುತ್ತದೆ.
ಕಪ್ಪು ಉಪ್ಪನ್ನು ನೀರಿನ ಜೊತೆ ಸೇವನೆ ಮಾಡುವುದ್ರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಯಕೃತ್ತನ್ನು ಸಕ್ರಿಯಗೊಳಿಸುತ್ತದೆ. ಜೀರ್ಣಕ್ರಿಯೆಗೆ ಕಪ್ಪು ಉಪ್ಪು ಒಳ್ಳೆಯ ಮದ್ದು.
ಕಪ್ಪು ಉಪ್ಪಿನ ನೀರು ಬೊಜ್ಜನ್ನು ಕರಗಿಸುತ್ತದೆ. ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ, ಬೊಜ್ಜು ಮತ್ತು ಇತರ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ನೆನಪಿರಲಿ ಕಪ್ಪು ಉಪ್ಪಿನ ಬದಲು ಬಿಳಿ ಉಪ್ಪನ್ನು ಉಪಯೋಗಿಸಬೇಡಿ.