ಬೆಕ್ಕುಗಳ ವೀಡಿಯೋಗಳನ್ನು ವೀಕ್ಷಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹಲವು ಸಂದರ್ಭಗಳಲ್ಲಿ ನಾಯಿಗಳಂತೆಯೇ ಬೆಕ್ಕುಗಳು ಕೂಡ ತಮ್ಮ ಯಜಮಾನ ಮತ್ತು ಅವರ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಇದೆ. ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಮಗುವೊಂದು ಕೋಣೆಯಲ್ಲಿ ಮೆಟ್ಟಿಲುಗಳ ಕಡೆಗೆ ಅಂಬೆಗಾಲಿಡುತ್ತಾ ಹೋದಾಗ, ಅದನ್ನು ನೋಡಿದ ಬೆಕ್ಕು ಖುರ್ಚಿಯಿಂದ ಹಾರಿ ಮಗುವಿನತ್ತ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು. ಮೆಟ್ಟಿಲುಗಳ ತುದಿಯನ್ನು ತಲುಪಿದಾಗ ಅದು ಬೀಳುವುದನ್ನು ಅರಿತ ಬೆಕ್ಕು, ಓಡಿಬಂದು ಮಗುವನ್ನು ಮನೆಯೊಳಕ್ಕೆ ತಳ್ಳುವ ವಿಡಿಯೋ ಇದಾಗಿದೆ.
ಮಿಂಚಿನ ವೇಗದಲ್ಲಿ ಮಗುವಿನ ಕಡೆಗೆ ಓಡುವ ಬೆಕ್ಕು ಮಗುವನ್ನು ರಕ್ಷಿಸುವ ಈ ವಿಡಿಯೋದಿಂದ ನೆಟ್ಟಿಗರು ಭಾವುಕರಾಗಿದ್ದಾರೆ. ಬೆಕ್ಕುಗಳು ಕೂಡ ಈ ರೀತಿಯಲ್ಲಿ ವರ್ತಿಸುತ್ತದೆಯೇ ಎಂದು ಹಲವರು ಕಮೆಂಟ್ ಹಾಕಿದ್ದಾರೆ. ನಾಯಿಗಳು ಮಾತ್ರ ಈ ರೀತಿ ಪ್ರಾಣ ಕಾಪಾಡುವುದನ್ನು ಧಾವಿಸುವುದನ್ನು ನೋಡಿದ್ದೇವೆ, ಆದರೆ ಬೆಕ್ಕುಗಳು ಕೂಡ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.