![Pushpa 2: The Rule' OTT rights bagged by Netflix instead of Amazon Prime Video: report](https://www.91-cdn.com/hub/wp-content/uploads/2023/11/Pushpa-2.jpg)
ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ ಆಗಸ್ಟ್ 15ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದ್ದು, ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪ ಚಿತ್ರತಂಡ ಇಂದು ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಇದೇ ಏಪ್ರಿಲ್ 8 ಅಲ್ಲು ಅರ್ಜುನ್ ಹುಟ್ಟು ಹಬ್ಬದ ದಿನದಂದೇ ಟೀಸರ್ ರಿಲೀಸ್ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇನ್ನುಳಿದಂತೆ ಫಹಾದ್ ಫಾಸಿಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಅನಸೂಯ ಭಾರದ್ವಾಜ್, ರಾವ್ ರಮೇಶ್, ವಿಜಯ್ ಸೇತುಪತಿ, ಪ್ರಿಯಾಮಣಿ, ಜಗದೀಶ್ ಪ್ರತಾಪ್, ಶ್ರೀ ತೇಜ್ ಸೇರಿದಂತೆ ಸಾಯಿ ಪಲ್ಲವಿ ಕೂಡ ತೆರೆ ಹಂಚಿಕೊಂಡಿದ್ದಾರೆ. ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದು, ಕಾರ್ತಿಕ ಶ್ರೀನಿವಾಸ್ ಸಂಕಲನವಿದೆ.