ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ ‘ಪುಷ್ಪಾ 2’ 16-12-2024 10:54AM IST / No Comments / Posted In: Featured News, Live News, Entertainment ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2’ ಹಲವು ದಾಖಲೆಗಳನ್ನು ಮುರಿದು ಹಾಕಿದ್ದು, ಗಳಿಕೆಯಲ್ಲಿ ‘kgf 2’ಹಾಗೂ ‘ಕಲ್ಕಿ 2898’ ಚಿತ್ರಗಳನ್ನು ಈಗಾಗಲೇ ಹಿಂದಿಕ್ಕಿದೆ. ಪುಷ್ಪ2 ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ ಒಟ್ಟಾರೆ 1292 ಕೋಟಿ ರೂ ಗಳಿಕೆ ಮಾಡಿದ್ದು, ‘ಬಾಹುಬಲಿ 2’ ಹೆಸರಿನಲ್ಲಿರುವ ದೊಡ್ಡ ದಾಖಲೆಯನ್ನು ಅಳಿಸಿ ಹಾಕಲಿದೆಯಾ ಕಾದು ನೋಡಬೇಕಾಗಿದೆ. ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸೇರಿದಂತೆ ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್, ಅನಸೂಯಾ ಭಾರದ್ವಾಜ್, ಧನಂಜಯ, ಆದಿತ್ಯ ಮೆನನ್, ಬ್ರಹ್ಮಾಜಿ, ದಯಾನಂದ ರೆಡ್ಡಿ ಬಣ್ಣ ಹಚ್ಚಿದ್ದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ಲಮಂಚಿಲಿ ರವಿಶಂಕರ್ ನವೀನ್ ಯೆರ್ನೇನಿ, ನಿರ್ಮಾಣ ಮಾಡಿದ್ದಾರೆ. ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ನೂಲಿ ಸಂಕಲನ, ಮಿರೋಸ್ಲಾವ್ ಕುಬಾ ಬ್ರೋಜೆಕ್ ಅವರ ಛಾಯಾಗ್ರಹಣವಿದೆ. View this post on Instagram A post shared by Mythri Movie Makers (@mythriofficial)