alex Certify ʼನೇರಳೆಹಣ್ಣುʼ ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನೇರಳೆಹಣ್ಣುʼ ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ.

* ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸೋಡಿಯಂ, ವಿಟಮಿನ್ ಸಿ, ಥಿಯಾಮಿನ್, ಫೋಲಿಕ್ ಆಸಿಡ್, ನಾರಿನಂಶ, ಕೆರೋಟಿನ್ ಮತ್ತು ಪ್ರೋಟೀನ್ ಗಳು ಹೇರಳವಾಗಿದೆ.

* ಮಧುಮೇಹ ಇರುವವರಿಗೆ ನೇರಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.

* ಜೀರ್ಣ ವ್ಯವಸ್ಥೆಗೆ ನೇರಳೆ ಹಣ್ಣು ಬಹಳ ಸಹಾಯ ಮಾಡುತ್ತದೆ. ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ಹೊರಕ್ಕೆ ಪಂಪ್ ಮಾಡುತ್ತದೆ. ರಕ್ತವು ಶುದ್ಧಿಯಾಗುತ್ತದೆ.

* ರಕ್ತ ಹೀನತೆ ಸಮಸ್ಯೆ ಎದುರಿಸುವವರು ನೇರಳೆ ಹಣ್ಣನ್ನು ತಿನ್ನುವುದರಿಂದ ಬಳಲಿಕೆ ತೊಲಗುತ್ತದೆ. ಶಕ್ತಿ, ಚೈತನ್ಯ ಬರುತ್ತದೆ. ದೇಹಕ್ಕೆ ಸಾಕಷ್ಟು ಕಬ್ಬಿಣಾಂಶವು ಲಭ್ಯವಾಗುತ್ತದೆ.

* 100 ಗ್ರಾಂಗಳ ನೇರಳೆ ಹಣ್ಣಿನಲ್ಲಿ ಶೇಕಡ 55ರಷ್ಟು ಪೊಟ್ಯಾಶಿಯಂ ಇರುತ್ತದೆ. ಹೃದಯ, ಮಧುಮೇಹ, ರಕ್ತದೊತ್ತಡ ಇರುವವರು ಒಂದೇ ಒಂದು ಹಣ್ಣು ತಿಂದರೂ ಸರಿಹೋಗುತ್ತದೆ.

* ಜೀರ್ಣಶಕ್ತಿ ಸರಿಯಾಗಿಲ್ಲದಿರುವಾಗ ಒಂದು ಕಪ್ ಮೊಸರಿಗೆ 4 ಚಮಚ ನೇರಳೆ ಹಣ್ಣಿನ ರಸ ಬೆರೆಸಿ ಸೇವಿಸಿದರೆ ಉಪಶಮನವಾಗುತ್ತದೆ.

* ಒಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ, ಮಾತನಾಡಲು ಆಗದೆ ಹಲ್ಲುಗಳು ನೋಯುತ್ತಿದ್ದರೆ, ಬಾಯಿ ದುರ್ವಾಸನೆ ಸಮಸ್ಯೆಗಳಿಗೆ ನೇರಳೆಹಣ್ಣು ದಿವ್ಯೌಷಧ. ಇದನ್ನು ಅಗಿದಾಗ ಹುಳಿ, ಸಿಹಿ ಒಗರು ಸುವಾಸಿತ ಜ್ಯೂಸ್ ಬಾಯಿಯ ದುರ್ನಾತವನ್ನು ದೂರಮಾಡುತ್ತದೆ. ಬಾಯಿಯ ಆರೋಗ್ಯವನ್ನು ಸಂರಕ್ಷಿಸುತ್ತದೆ.

* ನೇರಳೆಹಣ್ಣನ್ನು ಎಂಥ ಪರಿಸ್ಥಿತಿಯಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ತಪ್ಪದೇ ಏನಾದರೂ ಸ್ವಲ್ಪ ಆಹಾರವನ್ನು ಸೇವಿಸಿದ ಆನಂತರವೇ ತಿನ್ನಬೇಕು. ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವವರು ವೈದ್ಯರ ಸಲಹೆ ಮೇರೆಗೆ ನೇರಳೆಹಣ್ಣನ್ನು ಸೇವಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...