ಸ್ವಾತಂತ್ರ‍್ಯದ ಅಮೃತಮಹೋತ್ಸವ ಸಂಭ್ರಮದ 75 ವಾರಗಳಲ್ಲಿ ದೇಶಾದ್ಯಂತ 75 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಮುಖ ನಗರಗಳನ್ನು ಸಂಪರ್ಕಿಸಲು ಹಳಿ ಮೇಲೆ ಬರಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ‍್ಯೋತ್ಸವ ಭಾಷಣದಲ್ಲಿ ತಿಳಿಸಿದ್ದರು.
ಪುರಿಯಲ್ಲಿರುವ ಪುರಿ ಜಗನ್ನಾಥ ಧಾಮಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲೊಂದನ್ನು ಬಿಡಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಘೋಷಿಸಿದ್ದಾರೆ.
ಪುರಿ ನಿಲ್ದಾಣದ ಅಭಿವೃದ್ಧಿ ಕೆಲಸ ಸಾಗುತ್ತಿದ್ದು, ಇಲ್ಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಸದ್ಯಕ್ಕೆ ದೆಹಲಿ-ವಾರಣಾಸಿ ಮತ್ತು ದೆಹಲಿ-ಕಟ್ರಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆ ಲಭ್ಯವಿದೆ.
ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ಸಿಗುವ ಪ್ರೀಮಿಯಂ ಕಂಫರ್ಟ್‌ಗಳನ್ನು ಹೊಂದಿದೆ.
ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಇಂಜಿನ್-ರಹಿತ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160-180ಕಿಮೀ ವೇಗಲ್ಲಿ ಚಲಿಸುವ ಕ್ಷಮತೆ ಹೊಂದಿದೆ.
ಕೃಷಿ ಸುಧಾರಣಾ ಕಾಯ್ದೆಯಿಂದ ಅಸಮಾಧಾನಗೊಂಡು ಬಿಜೆಪಿ ತೊರೆದ ಮಾಜಿ ಶಾಸಕ
ಯೂರೋಪಿನ ರೈಲುಗಳಲ್ಲಿರುವಂತೆ ರೊಟೇಟಿಂಗ್ ಆಸನಗಳನ್ನು ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ, ಎಲ್‌ಇಡಿ ಲೈಟಿಂಗ್ ಹಾಗೂ ರೀಡಿಂಗ್ ಲೈಟ್‌ಗಳ ಸೌಲಭ್ಯವೂ ಇದೆ.
ಸ್ವಯಂಚಾಲಿತ ಆಗಮನ/ನಿರ್ಗಮನ ದ್ವಾರಗಳಿರುವ ಈ ರೈಲುಗಳ ಒಳಗೆ ಧೂಳುರಹಿತ ವಾತಾವರಣವಿದ್ದು, ಸೆನ್ಸಾರ್ ಆಧರಿತ ಅಂತರ್-ಸಂಪರ್ಕದ ಬಾಗಿಲುಗಳನ್ನು ಪ್ರತಿ ಕೋಚ್‌ನಲ್ಲಿಯೂ ನೀಡಲಾಗಿದೆ. ಚಿಕ್ಕ ಅಡುಗೆ ಕೋಣೆಯ ವ್ಯವಸ್ಥೆಯನ್ನೂ ರೈಲಿನಲ್ಲಿ ಕೊಡಲಾಗಿದೆ.
ಇದೇ ರೈಲುಗಳಿಗೆ ತರಲಾದ ಸುಧಾರಣೆಗಳ ಮೂಲಕ ವಿಪತ್ತು ಸೂಚಕ ದೀಪಗಳು, ತುರ್ತು ಬಟನ್‌ಗಳು, ಪುಶ್-ಬ್ಯಾಕ್ ರಿಕ್ಲೈನಿಂಗ್ ಆಸನಗಳು, ಪ್ರವಾಹದಿಂದ ರಕ್ಷಿಸಬಲ್ಲ ವ್ಯವಸ್ಥೆ, ಕೇಂದ್ರೀಕೃತ ಕೋಚ್ ನಿಗಾ ವ್ಯವಸ್ಥೆ ಸೇರಿದಂತೆ ಅನೇಕ ಹೊಸ ಫೀಚರ್‌ಗಳನ್ನು ಕೊಡಲಾಗಿದೆ.