ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಪ್ಯೂರ್ ಇಪ್ಲುಟೊ, 7G ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 78,999 ರೂಪಾಯಿ.ಆರು ಬಣ್ಣಗಳಲ್ಲಿ ಇ-ಸ್ಕೂಟರ್ ಲಭ್ಯವಿದೆ. ಪ್ಯೂರ್ ಇವಿಯ ಇಪ್ಲುಟೊ 7G ಅನ್ನು 1500ಡಬ್ಲ್ಯು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ.
ಇಪ್ಲುಟೊ 7G, ಕಂಪನಿಯ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸ್ಕೂಟರ್, ಒಮ್ಮೆ ಚಾರ್ಜ್ ಮಾಡಿದರೆ 90-120 ಕಿಲೋಮೀಟರ್ ವರೆಗೆ ಚಲಿಸುತ್ತದೆ.
ಮನೆಯಲ್ಲಿ ಸುಲಭವಾಗಿ ಚಾರ್ಜ್ ಮಾಡುವ ಅವಕಾಶವನ್ನು ಕಂಪನಿ ನೀಡಿದೆ. ಹೊಸ ಸ್ಕೂಟರ್, ಬಜಾಜ್ ಚೇತಕ್ ಹೋಲುತ್ತದೆ. ಸ್ಕೂಟರ್ 5-ಇಂಚಿನ ಎಲ್ ಸಿಡಿ ಡಿಸ್ಪ್ಲೇ, ಎಲ್ ಇಡಿ ಹೆಡ್‌ಲ್ಯಾಂಪ್, ಸ್ಮಾರ್ಟ್ ಲಾಕ್‌ನೊಂದಿಗೆ ಆಂಟಿ-ಥೆಫ್ಟ್ ಅಲಾರ್ಮ್ ಹೊಂದಿದೆ.
ಇಪ್ಲುಟೊ 7G ಯ ಒಟ್ಟು ತೂಕ 76 ಕೆಜಿ. ಬ್ಯಾಟರಿಯನ್ನು ಫುಲ್ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಇಪ್ಲುಟೊ 7G ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಯಾವುದೇ ಬಡ್ಡಿಯಿಲ್ಲದೆ 2,838 ರೂಪಾಯಿ ಇಎಂಐ ವೆಚ್ಚದಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ.