ಪ್ರಾಣಿಗಳು ಪರಸ್ಪರ ಸ್ನೇಹಪರವಾಗಿರುತ್ತದೆ. ಇನ್ನೊಂದು ಜೀವಿಯು ಸಂಕಷ್ಟದಲ್ಲಿದ್ದಾಗ ಬೇರೆ ಜಾತಿಯ ಪ್ರಾಣಿಗಳು ಅದರ ಸಂಕಷ್ಟಕ್ಕೆ ನೆರವಾಗಿರೋದರ ಬಗ್ಗೆ ಬಹುಶಃ ನೀವು ಕೇಳಿರಬಹುದು. ಆಮೆಯೊಂದು ಉಲ್ಟಾ ಆಗಿ ಬಿದ್ದಿದ್ದಾಗ, ಎಮ್ಮೆಯೊಂದು ತನ್ನ ಕೊಂಬಿನ ಸಹಾಯದಿಂದ ಅದನ್ನು ಸರಿಪಡಿಸಿತ್ತು. ಇದೀಗ ನೀವು ನಂಬಲಸಾಧ್ಯವಾದ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ಹೌದು, ಇತ್ತೀಚೆಗೆ ನಗರವೊಂದರ ಜನ ವಿಚಿತ್ರ ದೃಶ್ಯ ಕಂಡು ಅಚ್ಚರಿಗೊಂಡಿದ್ದಾರೆ. ನಾಯಿಯೊಂದು ಕುದುರೆ ಸವಾರಿ ಮಾಡುತ್ತಿರುವ ದೃಶ್ಯ ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ನೆಟ್ಟಿಗರಿಗೆ ಈ ಅಸಾಮಾನ್ಯ ದೃಶ್ಯವು ಜನಪ್ರಿಯ ಕಾರ್ಟೂನ್ ಪಿಎಡಬ್ಲ್ಯೂ ಪೆಟ್ರೋಲ್ ಅನ್ನು ನೆನಪಿಸಿತು. ಏಕೆಂದರೆ ಕುದುರೆಯು ತನ್ನ ಬೆನ್ನ ಮೇಲೆ ಶ್ವಾನವನ್ನು ಹೊತ್ತುಕೊಂಡು ರಸ್ತೆಯಲ್ಲಿ ಅಡ್ಡಾಡಿದೆ. ಅಲ್ಲದೆ ನೆಟ್ಟಿಗರು ಇದನ್ನು ಮಜ್ನು ಭಾಯ್ ಅವರ ಪೇಂಟಿಂಗ್‌ಗೆ ಹೋಲಿಸಿದ್ದಾರೆ. ಅಲ್ಲಿ ಬಾಲಿವುಡ್ ಚಿತ್ರದಲ್ಲಿ ಅನಿಲ್ ಕಪೂರ್ ಕುದುರೆಯ ಮೇಲೆ ನಿಂತಿರುವ ಕತ್ತೆಯನ್ನು ಚಿತ್ರಿಸಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ‘ಯೋಡ 4 ಎವರ್’ ಪೇಜ್ ಅಪ್‌ಲೋಡ್ ಮಾಡಿದೆ. ಇದು ಟನ್ ಗಳಷ್ಟು ವೀಕ್ಷಣೆಗಳು ಮತ್ತು ಹದಿನೆಂಟು ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಕುದುರೆಯು ನಗರದ ಮೂಲಕ ಸವಾರಿ ಮಾಡುತ್ತಿದ್ದರೆ, ನಾಯಿಯು ಆರಾಮಾಗಿ ಅದರ ಬೆನ್ನ ಮೇಲೆ ನಿಂತಿದೆ.
https://twitter.com/Yoda4ever/status/1548121488313778176?ref_src=twsrc%5Etfw%7Ctwcamp%5Etweetembed%7Ctwterm%5E1548170948183859200%7Ctwgr%5E%7Ctwcon%5Es2_&ref_url=https%3A%2F%2Fwww.india.com%2Fviral%2Fviral-video-puppy-rides-horse-through-city-patrol-kutta-ghoda-dog-riding-pony-5517509%2F