ಬೆಂಗಳೂರು: ಸರ್ಕಾರದ ‘ಪುಣ್ಯಕೋಟಿ’ ಯೋಜನೆಗೆ ನಟ ಕಿಚ್ಚ ಸುದೀಪ್ ರಾಯಭಾರಿಯಾಗಿದ್ದಾರೆ. ಗೋವುಗಳನ್ನು ದತ್ತು ನೀಡಲು ಸರ್ಕಾರ ಆರಂಭಿಸಿರುವ ಯೋಜನೆ ಇದಾಗಿದ್ದು, ಯಾವುದೇ ಸಂಭಾವನೆ ಪಡೆಯದೆ ರಾಯಭಾರಿಯಾಗಲು ಸುದೀಪ್ ಒಪ್ಪಿಕೊಂಡಿದ್ದಾರೆ.
ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರು ಸುದೀಪ್ ಅವರಿಗೆ ನೇಮಕಾತಿ ಪತ್ರ ಕಳುಹಿಸಿದ್ದಾರೆ. ಸುದೀಪ್ ಅವರನ್ನು ಪಶು ಸಂಗೋಪನೆ ಇಲಾಖೆಯ ಪುಣ್ಯಕೋಟಿ ಯೋಜನೆ ರಾಯಭಾರಿಯಾಗಿ ನೇಮಕ ಮಾಡಲಾಗಿದ್ದು, ಯಾವುದೇ ಸಂಭಾವನೆ ಇಲ್ಲದೆ ಈ ಕೆಲಸ ಮಾಡಲು ಅವರು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.