ಜಿಮ್‌ಗೆ ಹೋಗದೇ ದೇಹವನ್ನು ಹುರಿಗೊಳಿಸಿದ ಪಂಜಾಬ್‌ನ ಗುರ್ದಾಸ್ಪುರ ಜಿಲ್ಲೆಯ ಉಮರ್ವಾಲಾದ ಕುವರ್ ಅಮೃತ್‌ಬಿರ್ ಸಿಂಗ್ ಎಂಬ 19 ವರ್ಷದ ಯುವಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕ ಸೇರಿದ್ದಾನೆ.
ಒಂದು ನಿಮಿಷದ ಒಳಗೆ ಅತಿ ಹೆಚ್ಚಿನ ಪುಶ್-ಅಪ್‌ಗಳು (118) ಹಾಗೂ 30 ಸೆಕೆಂಡ್‌ಗಳ ಒಳಗೆ ಅತಿ ಹೆಚ್ಚಿನ ಸೂಪರ್ ಹ್ಯೂಮನ್ ಪುಶ್-ಅಪ್‌ಗಳನ್ನು (35) ಮಾಡಿದ ಅಮೃತ್‌ಬಿರ್ ಸಿಂಗ್ ಈ ದಾಖಲೆ ನಿರ್ಮಿಸಿದ್ದಾರೆ.
“ನಾನು ಎಂದಿಗೂ ಜಿಮ್‌ಗೆ ಹೋಗಿಲ್ಲ. ದೇಶೀ ಜುಗಾಡ್‌ನಲ್ಲಿ ಮನೆಯಲ್ಲೇ ಎಲ್ಲವನ್ನೂ ಮಾಡಿಕೊಂಡಿದ್ದೇನೆ” ಎಂದು ಸಿಂಗ್ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಇಟ್ಟಿಗೆಗಳು, ಕಬ್ಬಿಣದ ರಾಡ್, ಸಿಮೆಂಟ್, ಖಾಲಿ ಬಾಟಲಿಗಳು ಇತ್ಯಾದಿಗಳನ್ನು ಬಳಸಿ ತನ್ನ ಮನೆಯ ಮೇಲ್ಛಾವಣಿಯಲ್ಲೇ ಕಸರತ್ತು ಮಾಡಲು ಸವಲತ್ತುಗಳನ್ನು ಮಾಡಿಕೊಂಡಿದ್ದಾರೆ ಸಿಂಗ್.
ಪೊಲೀಸರಿಗೆ ರಜೆ, ಹೊಸ ಆದೇಶ: ಸಾಂದರ್ಭಿಕ ರಜೆ ಕಡಿತ
“ಇಂದು ಜನ ಜಿಮ್‌ಗಳಿಗೆ ಹೋಗುವುದನ್ನು ಎಂಜಾಯ್ ಮಾಡುತ್ತಾರೆ, ಅಲ್ಲಿಗೆ ಹೋಗದೇ ಕಸರತ್ತು ಮಾಡುವುದಿಲ್ಲ. ಆದರೆ ಪೈಲ್ವಾನರು ಜಿಮ್‌ಗಳಿಗೆ ಹೋಗುವುದಿಲ್ಲ” ಎನ್ನುವ ಸಿಂಗ್, ತನ್ನ ಶಾಲಾದಿನಗಳಲ್ಲಿ ಭಗತ್ ಸಿಂಗ್, ಕರ್ತಾರ್ ಸಿಂಗ್ ಹಾಗೂ ಉಧಮ್ ಸಿಂಗ್‌ರ ಪಾತ್ರಗಳನ್ನು ಮಾಡುವುದನ್ನು ಎಂಜಾಯ್ ಮಾಡುತ್ತಿದ್ದದ್ದಾಗಿ ಸಿಂಗ್ ತಿಳಿಸಿದ್ದಾರೆ.
https://www.youtube.com/watch?v=zNGzf2ExKFY