ಲೂಧಿಯಾನ: ಪಂಜಾಬ್ ನ ಲೂಧಿಯಾನ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಹುಡುಗಿ ಮೇಲೆ 22 ವರ್ಷದ ಯುವಕ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದಾನೆ. ಹುಡುಗಿ ವಾಸವಾಗಿರುವ ಪ್ರದೇಶದಲ್ಲಿಯೇ ಆತನೂ ವಾಸವಾಗಿದ್ದಾನೆ. ಶುಕ್ರವಾರ ಬೆಳಗಿನ ಜಾವ ಹುಡುಗಿ ಕುಟುಂಬ ಸದಸ್ಯರು ನಿದ್ದೆ ಮಾಡುವ ವೇಳೆ ಮನೆಗೆ ನುಗ್ಗಿದ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹುಡುಗಿ ಕಿರುಚಾಡಿದ್ದು, ನಿದ್ದೆಯಿಂದ ಎದ್ದ ಮನೆಯವರು ಆಕೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆರೋಪಿ ಕಳೆದ ಒಂದು ವರ್ಷದಿಂದ ಹುಡುಗಿಯನ್ನು ಹಿಂಬಾಲಿಸುತ್ತಿದ್ದ ಎಂಬುದು ಗೊತ್ತಾಗಿದೆ.