alex Certify ಚಲಿಸುತ್ತಿದ್ದ ಆಂಬುಲೆನ್ಸ್ ನಲ್ಲಿ ಮದ್ಯ ಸೇವಿಸಿದ ಪೊಲೀಸರು….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಆಂಬುಲೆನ್ಸ್ ನಲ್ಲಿ ಮದ್ಯ ಸೇವಿಸಿದ ಪೊಲೀಸರು….! ವಿಡಿಯೋ ವೈರಲ್

ಪೊಲೀಸರು ಅಂದ್ರೆ ಶಿಸ್ತಿನ ಸಿಪಾಯಿಗಳು, ಕಾನೂನು ಪರಿಪಾಲಕರು ಎಂದೇ ಭಾವಿಸಲಾಗಿದೆ. ಆದರೆ ಆಂಬುಲೆನ್ಸ್ ನೊಳಗೇ ಪೊಲೀಸರು ಮದ್ಯ ಸೇವಿಸಿರೋ ಘಟನೆ ಪಂಜಾಬ್ ನಲ್ಲಿ ನಡೆದಿದೆ.‌

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರ ನಡೆ ಬಗ್ಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೋಶಿಯಾರ್‌ಪುರದ ಕೇಂದ್ರ ಕಾರಾಗೃಹದ ಆಂಬುಲೆನ್ಸ್ ನೊಳಗೆ ಸಮವಸ್ತ್ರದಲ್ಲಿರುವ ಪೊಲೀಸರು ಮದ್ಯ ಸೇವಿಸಿದ್ದಾರೆ.

ವರದಿಗಳ ಪ್ರಕಾರ ಆಂಬುಲೆನ್ಸ್ ಚಲಿಸುತ್ತಿದ್ದಾಗ ಇಬ್ಬರು ಪೊಲೀಸರು ಖೈದಿಯೊಂದಿಗೆ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇಲಾಖಾ ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಇದೇ ರೀತಿಯ ಘಟನೆ ಒಡಿಶಾದಲ್ಲಿ ನಡೆದಿತ್ತು. ಅಲ್ಲಿ ಆಂಬುಲೆನ್ಸ್ ಚಾಲಕನೊಬ್ಬ ರೋಗಿಯೊಂದಿಗೆ ಮದ್ಯ ಸೇವಿಸಿದ್ದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.

— Nikhil Choudhary (@NikhilCh_) July 19, 2023

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...