ಕೋವಿಡ್ ಮೂರನೇ ಅಲೆಯ ಭೀತಿ ಎದುರಿಸುತ್ತಿರುವ ಪಂಜಾಬ್ ಶಾಲೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಲೂಧಿಯಾನಾದ ಎರಡು ಶಾಲೆಗಳಲ್ಲಿ ಹೊಸದಾಗಿ 20 ಕೋವಿಡ್ ಪ್ರಕರಣಗಳು ದಾಖಲಾದ ಬಳಿಕ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಈ ವಿದ್ಯಾಥಿಗಳಿಂದಾಗಿ ಶಾಲೆಯಲ್ಲಿರುವ ಇತರ ಮಕ್ಕಳಿಗೂ ಸೋಂಕು ತಗುಲಿರುವ ಸಾಧ್ಯತೆ ಇರುವ ಕಾರಣದಿಂದ ಅವರಿಗೂ ಪರೀಕ್ಷೆ ಮಾಡಲು ಆದ್ಯತೆ ನೀಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿರುವ ವಿದ್ಯಾರ್ಥಿಗಳು ಶಾಲೆಗೆ ಬಾರದೇ ಮನೆಯಲ್ಲೇ ಐಸೋಲೇಟ್ ಆಗಲು ಸೂಚಿಸಲಾಗಿದೆ.
DRDO ನೇಮಕಾತಿ: 10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ ಅರ್ಜಿ ಆಹ್ವಾನ
ಆಗಸ್ಟ್ 2ರಿಂದ ಪಂಜಾಬ್‌ನಲ್ಲಿ ಶಾಲೆಗಳನ್ನು ಮರುಆರಂಭಗೊಳಿಸಲಾಗಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ತಗ್ಗಿದ ಕೂಡಲೇ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಈ ಕುರಿತು ಘೋಷಣೆ ಮಾಡಿದ್ದರು. ವಿದ್ಯಾರ್ಥಿಗಳಿಗೆ ದೈಹಿಕ ಹಾಜರಾತಿ ಕಡ್ಡಾಯ ಮಾಡಿಲ್ಲ. ಪೋಷಕರು ಒಪ್ಪಿದಲ್ಲಿ ಮಕ್ಕಳು ಶಾಲೆಗೆ ದೈಹಿಕವಾಗಿ ಹಾಜರಾಗಬಹುದು.