ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಜನ ತಮ್ಮ ಕಂಟೆಂಟ್ ಗಳನ್ನು ವಿಭಿನ್ನವಾಗಿ ಮತ್ತು ವಿಶೇಷವಾಗಿ ಪ್ರಸ್ತುತಪಡಿಸುತ್ತಾರೆ. ಅಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್ನ ಪಟಿಯಾಲಾದ ಶಾಲೆಯೊಂದರ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅದರ ವಿಶಿಷ್ಟ ಮಾರ್ಕೆಟಿಂಗ್ ತಂತ್ರಕ್ಕಾಗಿ ವೈರಲ್ ಆಗುತ್ತಿದೆ.
ಪುಲ್ಕಿತ್ ಕೊಚಾರ್ ಎಂಬ ಬಳಕೆದಾರ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊ, ಶಾಲೆಯ ಸಮವಸ್ತ್ರದಲ್ಲಿ ಮೂವರು ವಿದ್ಯಾರ್ಥಿಗಳು ನಿಂತುಕೊಂಡು ಶಾಲೆಯ ಸೌಲಭ್ಯಗಳನ್ನು ಪಟ್ಟಿ ಮಾಡುತ್ತಾ ಪಂಜಾಬಿ ರಾಪ್ಗೆ ಲಿಪ್ ಸಿಂಕ್ ಮಾಡುವುದನ್ನು ತೋರಿಸುತ್ತದೆ.
ಶಾಲೆಯು “ಉತ್ತಮವಾದ ಕಟ್ಟಡ, ಈಜುಕೊಳ, ಸಂಗೀತ ತರಗತಿಗಳು, ಕಂಪ್ಯೂಟರ್ ತರಗತಿಗಳು ಮತ್ತು ಇತರ ಸೌಕರ್ಯಗಳನ್ನು ಹೊಂದಿದೆ ಎಂದು ಹಾಡು ಉಲ್ಲೇಖಿಸುತ್ತದೆ. ಈ ವಿಡಿಯೋ ಕ್ಲಿಪ್ ಸಖತ್ ವೈರಲ್ ಆಗಿದ್ದು ಜನ ಶಾಲೆಯ ವಿಭಿನ್ನ ಯೋಚನೆಯನ್ನ ಶ್ಲಾಘಿಸಿದ್ದರೆ, ಕೆಲವರು ನಾನು ನನ್ನ ಮಾಸ್ಟರ್ಸ್ ಪೂರ್ಣಗೊಳಿಸಿದ್ದರೂ ಈ ಶಾಲೆಗೆ ಸೇರಲು ಬಯಸುತ್ತೇನೆ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ