
ಚಂಡೀಗಢ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಬಗ್ಗೆ ಅವಾಚ್ಯ ಪದಬಳಕೆ ಆರೋಪದಡಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿಧು ವಿರುದ್ಧ ದೂರು ದಾಖಲಿಸಲಾಗಿದೆ. ಪಂಜಾಬ್ ಪೊಲೀಸರ ಬಗ್ಗೆ ನವಜೋತ್ ಸಿಂಗ್ ಸಿಧು ಅವಹೇಳನಕಾರಿಯಾಗಿ ಮಾತನಾಡಿ, ನಾನೊಂದು ಆವಾಜ್ ಹಾಕಿದರೆ ಪೊಲೀಸರು ಪ್ಯಾಂಟ್ ಒದ್ದೇ ಮಾಡ್ಕೋತಾರೆ. ನನ್ನ ಆವಾಜ್ ಗೆ ಪೊಲೀಸರು ಪ್ಯಾಂಟ್ ಒದ್ದೆ ಮಾಡಿಕೊಳ್ಳುತ್ತಾರೆ ಎಂದು ಅವಹೇಳನಕಾರಿಯಾಗಿ ಸಿದ್ದು ಹೇಳಿಕೆ ನೀಡಿದ್ದ ಆರೋಪದಡಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.