ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳ ವಿಷ್ಯ ಸದ್ಯ ಚರ್ಚೆಯಲ್ಲಿದೆ. ಮಧ್ಯೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ತೀರ್ಪೊಂದು ಎಲ್ಲರ ಗಮನ ಸೆಳೆದಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಯುವಕ ಮದುವೆಯಾಗಬಾರದು. ಆದರೆ ಅವನು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹುಡುಗಿ ಜೊತೆ ಲಿವ್ ಇನ್ ನಲ್ಲಿ ಇರಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.
ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಯುವ ದಂಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನ ಲ್ಲಿ ನಡೆಯುತ್ತಿದೆ. ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿರುವ ಜೋಡಿ ರಕ್ಷಣೆ ಕೋರಿದ್ದರು. ಇವರಿಬ್ಬರೂ 18 ವರ್ಷ ತುಂಬಿದೆ. ಯುವಕನಿಗೆ 18 ವರ್ಷ. ಆದರೆ ಹಿಂದೂ ವಿವಾಹ ಕಾಯ್ದೆಯಡಿ ಕಾನೂನುಬದ್ಧವಾಗಿ ಈಗ ಆತ ಮದುವೆಯಾಗುವಂತಿಲ್ಲ. ಮನೆಯವರಿಂದ ಬೆದರಿಕೆ ಕರೆ ಬರ್ತಿದೆ ಎಂದು ಕೋರ್ಟ್ ನಲ್ಲಿ ಜೋಡಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹರನರೇಶ್ ಸಿಂಗ್ ಗಿಲ್, ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಜೀವನವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ. ಜೋಡಿಗೆ ರಕ್ಷಣೆ ನೀಡುವಂತೆ ಸೂಚನೆ ನೀಡಲಾಗಿದೆ.