
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ, ನವೆಂಬರ್ 8ರಂದು ಕೇಂದ್ರ ಸರ್ಕಾರವು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ನಿರ್ಧರಿಸಿದೆ. ನವೆಂಬರ್ 8ರ ಒಳಗಾಗಿ ಕೇಂದ್ರ ಸರ್ಕಾರವೇ ಕೃಷಿ ಮಸೂದೆಯನ್ನು ಹಿಂತೆಗೆದುಕೊಂಡರೆ ಉತ್ತಮ. ಇಲ್ಲವಾದಲ್ಲಿ ನವೆಂಬರ್ 8ರ ವಿಶೇಷ ಅಧಿವೇಶನದಲ್ಲಿ ನಾವೇ ಆ ಮಸೂದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿದೆ ನಿಂಬೆಯ ಹಲವು ‘ಔಷಧೀಯ’ ಪ್ರಯೋಜನಗಳು
ಇನ್ನು ಬಿಎಸ್ಎಫ್ಗೆ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಚರಂಜಿತ್ ಸಿಂಗ್ ಚನ್ನಿ ವಿರೋಧಿಸಿದ್ದಾರೆ. ಬಿಎಸ್ಎಫ್ ವ್ಯಾಪ್ತಿಯನ್ನು 15 ಕಿಲೋಮೀಟರ್ನಿಂದ 50 ಕಿಲೋಮೀಟರ್ಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಅಧಿಸೂಚನೆಯನ್ನೂ ನವೆಂಬರ್ 8ರೊಳಗಾಗಿ ರದ್ದುಗೊಳಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಸರ್ವಾಧಿಕಾರದ ಪರಮಾವಧಿಯಾಗಿದೆ.
ಮೋದಿ ಸರ್ಕಾರದ ಇಂತಹ ನಿರ್ಧಾರಗಳು ಪಂಜಾಬ್ ಸರ್ಕಾರ ಹಾಗೂ ಕೇಂದ್ರದ ನಡುವಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.