ರೈತರ ನಿರಂತರ ಪ್ರತಿಭಟನೆಗಳ ಕಾರಣ ಆಗಸ್ಟ್ 20-23ರ ನಡುವೆ ರೈಲಿನಲ್ಲಿ ಸಂಚರಿಸಲು ಸಾಧ್ಯವಾಗದ ಎಲ್ಲಾ ಪ್ರಯಾಣಿಕರ ಟಿಕೆಟ್ ಹಣವನ್ನು ಮರಳಿಸಲಾಗುವುದು ಎಂದು ಪಂಜಾಬ್‌ನ ಫಿರೋಜ಼್ಪುರ ರೈಲ್ವೇ ವಿಭಾಗ ತಿಳಿಸಿದೆ.
ಒಟ್ಟಾರೆ 12,300 ಪ್ರಯಾಣಿಕರಿಗೆ ಟಿಕೆಟ್ ಹಣದ ರೂಪದಲ್ಲಿ 53.65 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಲಾಗುವುದು ಎಂದು ರೈಲ್ವೇ ವಿಭಾಗ ತಿಳಿಸಿದೆ.
ಕಬ್ಬಿನ ಬೆಲೆ ಏರಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾನಿರತ ರೈತರು ಎಲ್ಲೆಡೆ ರೈಲು ಹಾಗೂ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದಾರೆ. ಪ್ರತಿಭಟನೆ ಕಾರಣದಿಂದ ಒಟ್ಟಾರೆ 89 ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.