ಚಂಡೀಗಢ: ಪಂಜಾಬ್ ಸಿಎಂ ಭಗವಂತ್ ಮಾನ್ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದರಿಂದ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಭೇಟಿ ಮಾಡಿದ ನಂತರ ಪ್ರತಿಭಟನಾ ನಿರತ ಪಂಜಾಬ್ ರೈತರು ಭತ್ತ ಬಿತ್ತನೆ ವೇಳಾಪಟ್ಟಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗೆ ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಜೂನ್ 10 ರಿಂದ ಭತ್ತದ ಬಿತ್ತನೆಗೆ ಅನುಮತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಬೆಳೆಗಳಿಗೆ ವಿದ್ಯುತ್ ಸೌಲಭ್ಯ ಹೆಚ್ಚಿಸಲು, ಪ್ರತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ನೀಡುವ ಬೇಡಿಕೆಗೆ ಸಿಎಂ ಒಪ್ಪಿದ್ದಾರೆ.
ಇದಲ್ಲದೇ ಪಂಜಾಬ್ ಸರ್ಕಾರ ಭತ್ತದ ನೇರ ಬಿತ್ತನೆಗಾಗಿ ಎಕರೆಗೆ 1,500 ರೂ. ಸಹಾಯಧನ ನೀಡಲು ಅನುಮೋದನೆ ನೀಡಿದೆ. ಮುಂಬರುವ ಖಾರಿಫ್ ಋತುವಿನಲ್ಲಿ ರೈತರಿಗೆ ನೇರವಾಗಿ ಭತ್ತದ ಬಿತ್ತನೆಗಾಗಿ ಪ್ರತಿ ಎಕರೆಗೆ 1,500 ರೂ ಸಬ್ಸಿಡಿ ನೀಡಲು ಸಿಎಂ ಭಗವಂತ್ ಮಾನ್ ಅನುಮೋದನೆ ನೀಡಿದರು.