ಪಂಜಾಬ್‌ನ ಬಟಿಂಡಾದಲ್ಲಿ ಖಾಸಗಿ ಬಸ್ ಕಾಲುವೆಗೆ ಬಿದ್ದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಭಟಿಂಡಾ-ತಲ್ವಾಂಡಿ ಸಾಬೋ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಬಟಿಂಡಾ ಎಸ್‌ಎಸ್‌ಪಿ ಅಮ್ನೀತ್ ಕೊಂಡಲ್ ಅವರು ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು, ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬಟಿಂಡಾ ನಗರ ಶಾಸಕ ಜಗ್ರೂಪ್ ಸಿಂಗ್ ಗಿಲ್ ಅವರು, ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಪ್ರಸ್ತುತ 18 ಗಾಯಗೊಂಡ ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿರುವ ಬಟಿಂಡಾ ನಗರದ ಶಹೀದ್ ಭಾಯಿ ಮಣಿ ಸಿಂಗ್ ಸಿವಿಲ್ ಆಸ್ಪತ್ರೆಗೆ ಶಾಸಕರು ಭೇಟಿ ನೀಡಿದ್ದರು. ಬಟಿಂಡಾ ಸಿವಿಲ್ ಸರ್ಜನ್ ಡಾ. ರಮಣದೀಪ್ ಸಿಂಗ್ಲಾ ಅವರು ಗಿಲ್ ಅವರ ನೇತೃತ್ವದ್ಲಲಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಬಟಿಂಡಾದ ಜಿವಾನ್ ಸಿಂಗ್ ವಾಲಾ ಗ್ರಾಮದ ಬಳಿ ಬಸ್ ಸೇತುವೆಗೆ ಅಪ್ಪಳಿಸಿ ಕಾಲುವೆಗೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಎನ್‌ಡಿಆರ್‌ಎಫ್, ಪೊಲೀಸರು ಮತ್ತು ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಖಾಸಗಿ ಬಸ್ ತಲವಾಂಡಿ ಸಾಬೋದಿಂದ ಬಟಿಂಡಾ ನಗರಕ್ಕೆ ತೆರಳುತ್ತಿದ್ದಾಗ ಸ್ಕಿಡ್ ಆಗಿ ಕಾಲುವೆಗೆ ಬಿದ್ದಿದೆ.