ನವದೆಹಲಿ: ಪಂಜಾಬ್ ಸರ್ಕಾರ 12 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಿಸಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸರ್ಕಾರಿ ಶಾಲೆಯ 12 ನೇ ತರಗತಿ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ಫೋನ್ ವಿತರಿಸುವ ಯೋಜನೆ ಆರಂಭಿಸಿದ್ದಾರೆ.
ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಿಸಲಾಗಿದೆ. ಪಂಜಾಬ್ ಸ್ಮಾರ್ಟ್ ಕನೆಕ್ಟ್ ಯೋಜನೆಯಡಿ ಸರ್ಕಾರಿ ಶಾಲೆಗಳ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಫೋನ್ ನೀಡಲಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಚಿವರು, ಶಾಸಕರು ಸ್ಮಾರ್ಟ್ಫೋನ್ ವಿತರಿಸಿದ್ದಾರೆ.
1,75,443 ಸ್ಮಾರ್ಟ್ ಫೋನ್ ಗಳನ್ನು ವಿತರಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 50 ಸಾವಿರ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ವಿತರಿಸಲಾಗಿದೆ. ಉಳಿದ ಮಕ್ಕಳಿಗೂ ಶೀಘ್ರವೇ ಸ್ಮಾರ್ಟ್ಫೋನ್ ವಿತರಿಸಲಾಗುವುದು ಎಂದು ಹೇಳಲಾಗಿದೆ.