
ಶನಿವಾರ, ಪಂಜಾಬ್‌ನ ಫ್ಯಾಷನ್ ಇನ್ಫ್ಲುಯೆನ್ಸರ್ ಆಂಚಲ್ ಅರೋರಾ ಅವರು ತಮ್ಮ ವಿವಾಹದ ಹಲ್ದಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಅವರ ಕಾರನ್ನು ತಡೆದಿದ್ದರು.
ಸಾಮಾನ್ಯವಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಆದರೆ ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಅವರನ್ನು ಒಂದು ವಿಶೇಷ ರೀತಿಯಲ್ಲಿ ಬಿಟ್ಟು ಕಳುಹಿಸಿದ್ದಾರೆ.
ಆಂಚಲ್ ಅರೋರಾ ಅವರು ಹಲ್ದಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಪೊಲೀಸರು ಅವರ ಕಾರನ್ನು ತಡೆದಿದ್ದು, ಈ ವೇಳೆ ಆಂಚಲ್ ಅರೋರಾ, ಪೊಲೀಸ್ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ಮಾತನಾಡಿದ್ದಾರೆ. ಇದು ನನ್ನ ಹಲ್ದಿ ಕಾರ್ಯಕ್ರಮ, ದಯವಿಟ್ಟು ಬಿಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಅವರ ಮಾತುಗಳನ್ನು ಕೇಳಿದ ಪೊಲೀಸ್ ಅಧಿಕಾರಿಗಳು ಸಹಾನುಭೂತಿ ತೋರಿಸಿ “ನಮಗೆ ಸಿಹಿ ನೀಡಿ ಹೋಗಿ” ಎಂದು ಹೇಳಿ ಅವರನ್ನು ಬಿಟ್ಟು ಕಳುಹಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಜನರು ಪೊಲೀಸ್ ಅಧಿಕಾರಿಗಳ ಕೆಲಸವನ್ನು ಶ್ಲಾಘಿಸಿದ್ದಾರೆ. “ಸುಂದರವಾದ ವಿಡಿಯೋ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
View this post on Instagram