ಪಂಜಾಬ್ ಸಿಎಂ ಭಗವಂತ್ ಮಾನ್ ಜಲಂಧರ್ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ದೋಣಿ ಕೆಲವು ಕ್ಷಣಗಳವರೆಗೆ ತನ್ನ ನಿಯಂತ್ರಣ ಕಳೆದುಕೊಂಡಿದ್ದು ಕೂದಲೆಳೆಯ ಅಂತರದಲ್ಲಿ ಭಗವಂತ್ ಮಾನ್ ಅಪಾಯದಿಂದ ಪಾರಾಗಿದ್ದಾರೆ.
ದೋಣಿ ನಾವಿಕ ಕೂಡಲೇ ಸಮತೋಲನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವಾಹ ಪೀಡಿತ ಗಿಡರಪಿಂಡಿ ಗ್ರಾಮಕ್ಕೆ ಭಗವಂತ್ ಮಾನ್ ಭೇಟಿ ನೀಡಿದ್ದರು.
ಈ ಘಟನೆಯನ್ನು ಸೆರೆ ಹಿಡಿಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರೀ ಮಳೆಯಿಂದಾಗಿ ಓವರ್ ಲೋಡ್ ಮಾಡಿದ್ದ ದೋಣಿಯು ಸಮತೋಲನ ಕಳೆದುಕೊಂಡಿದೆ. ದೋಣಿಯಲ್ಲಿದ್ದವರು ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದಾರೆ. ಈ ದೋಣಿಯಲ್ಲಿ ಭಗವಂತ್ ಮಾನ್ ಕೂಡ ಇದ್ದರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದಕ್ಕೂ ಮುನ್ನ ಮಾಡಿದ್ದ ಟ್ವೀಟ್ನಲ್ಲಿ ಸಿಎಂ ಭಗವಂತ್ ಮಾನ್ ಫಿರೋಜ್ಪುರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲಿ ಸಂತ್ರಸ್ತರೊಂದಿಗೆ ಅವರು ಮಾತುಕತೆ ನಡೆಸಿದ್ದರು. ವಿನಾಶಕಾರಿ ಪ್ರವಾಹದ ಸಂದರ್ಭದಲ್ಲಿ ಸರ್ಕಾರವು ಜನರಿಗೆ ಸಂಪೂರ್ಣ ನೆರವನ್ನು ನೀಡುತ್ತಿದೆ. ಮನೆಗಳು ಹಾಗೂ ಇತರೆ ಆಸ್ತಿಗಳ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಅವರು ಟ್ವೀಟಾಯಿಸಿದ್ದರು.