ಪಂಜಾಬ್ ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಪಡೆಗಳು ಪಾಕಿಸ್ತಾನಿ ನುಸಳುಕೋರನನ್ನು ಹೊಡೆದುರುಳಿಸಿವೆ. ಇದರೊಂದಿಗೆ, ಡ್ರೋನ್ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿದ ಮಧ್ಯವಯಸ್ಕ ವ್ಯಕ್ತಿ ಅಮೃತಸರ ಸೆಕ್ಟರ್ ಮುಂಭಾಗದ ಪ್ರದೇಶದಲ್ಲಿ ಕೊಲ್ಲಲ್ಪಟ್ಟಿದ್ದಾನೆ. ನುಸಳುಕೋರನಿಗೆ ಭದ್ರತಾ ಪಡೆಗಳು ಶರಣಾಗಲು ಸೂಚಿಸಿದರೂ ಆತ ನಿಲ್ಲದೇ ಮುಂದೆ ಸಾಗಿದ್ದು, ಭದ್ರತಾ ಪಡೆಗಳ ಸಮೀಪಕ್ಕೆ ನುಗ್ಗಲು ಯತ್ನಿಸಿದ್ದಾನೆ. ಮುಂದಿನ ದುರ್ಘಟನೆ ತಡೆಯಲು BSF ಪಡೆಗಳು ಆತ್ಮರಕ್ಷಣೆಗಾಗಿ ನುಸಳುಕೋರನ ಮೇಲೆ ಗುಂಡು ಹಾರಿಸಿದ್ದಾರೆ ಎಂದು BSF ವಕ್ತಾರರು ತಿಳಿಸಿದ್ದಾರೆ.
ಗಡಿ ಪಡೆ, ಬುಧವಾರ ಬೆಳಿಗ್ಗೆ ಕೈಗೊಂಡ ವಿಭಿನ್ನ ಕ್ರಮದಲ್ಲಿ, ಅದೇ ವಲಯದ ಹವೇಲಿಯನ್ ಗ್ರಾಮದ ಬಳಿ ಡ್ರೋನ್ ಹೊಡೆದುರುಳಿಸಲಾಗಿದೆ. ಬಿಳಿ ಕ್ವಾಡ್ ಕಾಪ್ಟರ್ ಡ್ರೋನ್(ಡಿಜೆಐ ಫ್ಯಾಂಟಮ್ 4 ಮಾದರಿ) ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿರುವಾಗ ಅದನ್ನು ತಟಸ್ಥಗೊಳಿಸಲಾಯಿತು ಎಂದು ಹೇಳಲಾಗಿದೆ.