ಚಂಡೀಗಢ: ಪಂಜಾಬ್‌ನ ಬಟಿಂಡಾದ 5 ವರ್ಷದ ಬಾಲಕ ಗೀತಾಂಶ್ ಗೋಯಲ್ 2 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಬಾಲಕನನ್ನು ಆಹ್ವಾನಿಸಲಾಗಿದೆ.
ಗೀತಾಂಶ್ 4 ವರ್ಷ ಮತ್ತು ಮೂರು ತಿಂಗಳ ವಯಸ್ಸಿನಲ್ಲಿ 1 ನಿಮಿಷ ಮತ್ತು 54 ಸೆಕೆಂಡುಗಳ ಅವಧಿಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದಾನೆ. ಈ ಮೂಲಕ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಮೆಚ್ಚುಗೆ ಪ್ರಮಾಣಪತ್ರ ಮತ್ತು ವರ್ಲ್ಡ್ ರೆಕಾರ್ಡ್ ಯೂನಿವರ್ಸಿಟಿಯಿಂದ ರೆಕಾರ್ಡ್ ಬ್ರೇಕಿಂಗ್ನಲ್ಲಿ ಗ್ರ್ಯಾಂಡ್ ಮಾಸ್ಟರ್ಸ್ ಎಂಬ ಬಿರುದು ಪಡೆದಿದ್ದಾನೆ.
ಇನ್ನು ರಾಷ್ಟ್ರಪತಿ ಭವನದಿಂದ ಬಂದ ಕರೆ ಬಗ್ಗೆ ಮಾತನಾಡಿದ ಗೀತಾಂಶ್ ತಂದೆ ಡಾ. ವಿಪಿನ್ ಗೋಯೆಲ್, ನಮಗೆ ರಾಷ್ಟ್ರಪತಿ ಭವನದಿಂದ ಫೋನ್ ಕರೆ ಬಂದಿದೆ. ಇ-ಮೇಲ್ ಕೂಡ ಕಳುಹಿಸಲಾಗಿದೆ. ನಮ್ಮ ಮಗನನ್ನು ರಾಷ್ಟ್ರಪತಿಗಳ ಭೇಟಿಗೆ ಆಹ್ವಾನಿಸಲಾಗಿದೆ. ಇದು ನಮಗೆ ತುಂಬಾ ಸಂತೋಷದ ವಿಷಯ ಎಂದು ಹೇಳಿದ್ರು.
ಮಗುವೊಂದು 4 ವರ್ಷ 3 ತಿಂಗಳ ವಯಸ್ಸಿನಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ ಎಂದು ನಾವು ತುಂಬಾ ಹೆಮ್ಮೆಪಡುತ್ತೇವೆ ಎಂದು ಬಾಲಕನ ತಂದೆ ತಿಳಿಸಿದ್ರು.