ಇಂದು ಪಂಚರಾಜ್ಯ ಚುನಾವಣೆಗಳ ರಿಸಲ್ಟ್ ಡೇ. ಮತದಾರ ನೀಡಿದ ತೀರ್ಪು ಹೊರಬೀಳುವ ದಿನ. ಉತ್ತರಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ ಈ ಐದು ರಾಜ್ಯಗಳ ರಾಜಕೀಯ ಭವಿಷ್ಯ ನಿರ್ಧಾರವಾಗುವ ದಿನ. ಅಂದ್ಹಾಗೆ ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ, ನಾಲ್ಕು ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತಿದೆ. ಪಂಜಾಬ್‌ನಲ್ಲಿ ಎಎಪಿ ಮೇಲುಗೈ ಸಾಧಿಸಿದೆ.
ಫಲಿತಾಂಶದ ಆರಂಭದಲ್ಲೇ ಪಂಜಾಬ್‌ನಲ್ಲಿ ಪಕ್ಷವು ಬಹುಮತದ ಅಂಕವನ್ನು ದಾಟಿದ ಕಾರಣ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಂತೋಷ ಮುಗಿಲು ಮುಟ್ಟಿದೆ. ಆಮ್ ಆದ್ಮಿ ಪಕ್ಷದ ಗೆಲುವು ಖಚಿತವಾಗಿರೋದ್ರಿಂದ, ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಅವರ ಕ್ಷೇತ್ರ ಸಂಗ್ರೂರ್‌ನಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮಾಚರಣೆ ಜೋರಾಗಿದೆ.
ಎಎಪಿ ಕಾರ್ಯಕರ್ತರು ಪಂಜಾಬಿನ, ‘ಧೋಲ್’ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಸಿಹಿ ಹಂಚಿ ಗೆಲುವಿನ ಸಂಭ್ರಮಾಚರಣೆ ಮಾಡಿದ್ದಾರೆ. ಇನ್ನು ಭಗವಂತ್ ಮಾನ್ ಎಂಎಲ್ಎ ಎಲೆಕ್ಷನ್ ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದು, ಧುರಿ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಹಿನ್ನೆಡೆಯಾಗಿದೆ.