alex Certify BREAKING: ರಾಜ್ ಕುಟುಂಬದಿಂದ ಪುನೀತ್ 11 ನೇ ದಿನದ ಕಾರ್ಯ, ಸಿಎಂ ಭಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜ್ ಕುಟುಂಬದಿಂದ ಪುನೀತ್ 11 ನೇ ದಿನದ ಕಾರ್ಯ, ಸಿಎಂ ಭಾಗಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ಸ್ಥಳದಲ್ಲಿ 11ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗಿಯಾಗಲಿದ್ದಾರೆ.

ಪುನೀತ್ ಪತ್ನಿ ಅಶ್ವಿನಿ ಹಾಗೂ ಮಕ್ಕಳು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ರಾಜಕುಮಾರ್ ಕುಟುಂಬದವರು 11 ನೇ ದಿನದ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಚಿತ್ರರಂಗ, ರಾಜಕೀಯ ರಂಗದ ಗಣ್ಯರು, ಬಂಧುಗಳು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುನೀತ್ ಇಷ್ಟದ ಖಾದ್ಯಗಳನ್ನು ಇಟ್ಟು ಪೂಜಾ ಕಾರ್ಯ ನೆರವೇರಿಸಲಾಗಿದೆ.

ಕುಟುಂಬದವರು ಪೂಜೆ ಮುಗಿಸಿ ತೆರಳುವವರೆಗೂ ಅಭಿಮಾನಿಗಳಿಗೆ ಸಮಾಧಿ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಸಮಾಧಿ ವೀಕ್ಷಣೆಗೆ ಅಪಾರ ಅಭಿಮಾನಿಗಳು ಆಗಮಿಸಿದ್ದಾರೆ. ಕಂಠೀರವ ಸ್ಟುಡಿಯೋ ಗೇಟ್ ಮುಂಭಾಗದಲ್ಲಿ ಪುನೀತ್ ರಾಜಕುಮಾರ್ ಪರವಾಗಿ ಘೋಷಣೆ ಕೂಗಿದ್ದಾರೆ. ಕುಟುಂಬದವರು ಪೂಜೆ ಸಲ್ಲಿಸಿ ತೆರಳಿದ ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти жук Необычайная головоломка: находя 3 различия за 9 секунд, можно найти Коллекция для смелых и твердых: в поисках меча гладиатора