ಪುಣೆಯ ಯುವತಿಯೊಬ್ಬರು ಆಫೀಸ್ ನಲ್ಲಿ ನಡೆದ ಮೀಟಿಂಗ್ ನಲ್ಲಿ ಡಾನ್ಸ್ ಮಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಜಲಿ ಪಟ್ವಾಲ್, ಕಂಟೆಂಟ್ ಕ್ರಿಯೇಟರ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪುಣೆ ಕಚೇರಿಯಲ್ಲಿ ತಿಂಗಳ ಟೀಂ ಮೀಟಿಂಗ್ ಆಯೋಜನೆ ಮಾಡಲಾಗಿತ್ತು. ಕೆಲವರು ಝೂಮ್ ಮೂಲಕ ಸಭೆಗೆ ಹಾಜರಾಗಿದ್ದರು. ಕಚೇರಿಗೆ ಬಂದಿದ್ದ ಅಂಜಲಿ, ಭಾಗ್ ಮಿಲ್ಕಾ ಭಾಗ್ ಹಾಡಿಗೆ ಡಾನ್ಸ್ ಮಾಡಿದ್ರು. ಅಂಜಲಿ ಡಾನ್ಸ್ ನೋಡಿದ ಸಹೋದ್ಯೋಗಿಗಳು ಸೂಪರ್ ಅಂತ ಕಮೆಂಟ್ ಮಾಡಿದ್ದಲ್ಲದೆ ಚಪ್ಪಾಳೆ ತಟ್ಟಿದ್ರು.
ಅಂಜಲಿ ಮೀಟಿಂಗ್ ನಲ್ಲಿ ಯಾಕೆ ಡಾನ್ಸ್ ಮಾಡಿದ್ರು ಎನ್ನುವ ಪ್ರಶ್ನೆ ನಮ್ಮನ್ನು ಕಾಡೋದು ಸಹಜ. ಅದಕ್ಕೆ ಅಂಜಲಿ ಶೀರ್ಷಿಕೆಯಲ್ಲಿ ಉತ್ತರ ನೀಡಿದ್ದಾರೆ. ನೀವು ನಿಮ್ಮ ರೆಸ್ಯೂಮ್‌ನಲ್ಲಿ ಡ್ಯಾನ್ಸ್ ನಿಮ್ಮ ಹವ್ಯಾಸ ಎಂದು ಬರೆದಿದ್ದರೆ, ಮೊದಲ ಟೀಂ ಮೀಟಿಂಗ್ ನಲ್ಲಿ ಹೀಗೆ ಆಗುತ್ತೆ ಎಂದು ಅಂಜಲಿ ಶೀರ್ಷಿಕೆ ಹಾಕಿದ್ದಾರೆ. ಇದನ್ನು ನೋಡಿದ ಬಳಕೆದಾರರು ಹೊಸ ಭಯವನ್ನು ಹುಟ್ಟುಹಾಕಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.