
ಪೂಜಾ ಪಾಠಕ್ ಕುಲಕರ್ಣಿ ಎಂಬ ಮಹಿಳೆ ಘಟನೆಯನ್ನು ವಿಡಿಯೋದಲ್ಲಿ ವಿವರಿಸಿದ್ದು, “ನಾನು ಒಂದು ವಾಹನವನ್ನು ತೆಗೆದುಕೊಂಡಿದ್ದೇನೆ. ಅದರ ಎರಡು ಕಂತುಗಳು ಬಾಕಿ ಉಳಿದಿವೆ. ಫೈನಾನ್ಸ್ ಕಂಪನಿಯು ನನಗೆ ತಿಳಿಸದೇ ಅಧಿಕಾರಿಗಳನ್ನು ಕಳುಹಿಸಿ ನನ್ನ ವಾಹನವನ್ನು ತೆಗೆದುಕೊಂಡು ಹೋಗಿತ್ತು. ನಾನು ಹೆದರಿ ವಸಂತ ಮೋರೆ ಅವರಿಗೆ ಕರೆ ಮಾಡಿದೆ. ನನಗೆ ಅವರು ಫೈನಾನ್ಸ್ ಕಂಪನಿಗೆ ಹೋಗುವಂತೆ ಹೇಳಿದರು. ಬಳಿಕ ಅವರು ಕಂಪನಿಯ ಕಚೇರಿಗೆ ಕರೆ ಮಾಡಿ ಅಧಿಕಾರಿಯೊಂದಿಗೆ ಮಾತನಾಡಿದ ನಂತರ, ನನಗೆ ನನ್ನ ವಾಹನವನ್ನು ಹಿಂತಿರುಗಿಸಲಾಯಿತು. ಆದರೆ ಅಧಿಕಾರಿಯು ನನಗೆ ಮಾನಸಿಕ ಕಿರುಕುಳ ನೀಡಿದರು. ಅಸಭ್ಯ ಸಂದೇಶಗಳನ್ನು ಕಳುಹಿಸಿದರು” ಎಂದಿದ್ದಾರೆ.
ಇಂತಹ ಕೃತ್ಯವೆಸಗಿದ ಅಧಿಕಾರಿಯನ್ನು ವಸಂತ ಮೋರೆ ಅವರ ಕಚೇರಿಗೆ ಕರೆಸಿ ಅಲ್ಲಿ ಅವರನ್ನು ಮಹಿಳೆ ಮತ್ತು ಆಕೆಯ ತಾಯಿ ಥಳಿಸಿದ್ದಾರೆ. ಈ ವೇಳೆ ವಸಂತ ಮೋರೆ ಅಧಿಕಾರಿಗೆ ಎಚ್ಚರಿಸಿದ್ದಾರೆ.