ಮಹಾರಾಷ್ಟ್ರದ ಪುಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಗಳು ಕುಡಿದ ಮತ್ತಿನಲ್ಲಿ ವನವಾಡಿಯ ಜಗತಾಪ್ ಚೌಕ್‌ನಲ್ಲಿ ಶನಿವಾರ ರಾತ್ರಿ ರಂಪಾಟ ಸೃಷ್ಟಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಕುಡಿದ ಸ್ಥಿತಿಯಲ್ಲಿದ್ದ ಯುವತಿಯೊಬ್ಬರು ರಸ್ತೆ ಮೇಲೆ ಕುಳಿತು ಜಗತಾಪ್ ಚೌಕ್‌ನಲ್ಲಿ ಕೂಗಾಡಲು ಪ್ರಾರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯ ನಂತರ, ಪ್ರತ್ಯಕ್ಷದರ್ಶಿಯೊಬ್ಬರು ಪುಣೆಯ ವನವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತ್ಯಕ್ಷದರ್ಶಿಯು ನೀಡಿದ ಮಾಹಿತಿಯ ಪ್ರಕಾರ, ಯುವತಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಳು. ಸ್ಥಳದಲ್ಲಿ ಜನಸಂದಣಿ ಜಮಾಯಿಸಿ ಟ್ರಾಫಿಕ್ ವ್ಯತ್ಯಯಕ್ಕೆ ಕಾರಣವಾಯಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸ್ಥಳೀಯ ನಾಗರಿಕರು ಪೊಲೀಸರಿಗೆ ತಿಳಿಸಲು ಪ್ರಯತ್ನಿಸಿದರು.
ಅಧಿಕೃತ ಮಾಹಿತಿಯ ಪ್ರಕಾರ, ಯುವತಿ ಪುಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯ ಮಗಳು. ಆಕೆ ಮದ್ಯ ವ್ಯಸನಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಕರೆ ಬಂದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಈ ಹಿಂದೆ ಡಿಸೆಂಬರ್ 31 ರಂದು ಇದೇ ಯುವತಿ ಸೊಸೈಟಿ ಆವರಣದಲ್ಲಿ ಗಲಾಟೆ ಮಾಡಿದ್ದರು. ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿದ್ದು, ಅವರನ್ನು ತಳ್ಳಿದ್ದರು ಎನ್ನಲಾಗಿದೆ. ನಂತರ, ಅವರು ಸೊಸೈಟಿಯಿಂದ ಟೇಬಲ್ ಅನ್ನು ಗೇಟ್‌ಗೆ ತಂದು ರಸ್ತೆಗೆ ಎಸೆದು ಟ್ರಾಫಿಕ್‌ಗೆ ಅಡ್ಡಿಯುಂಟು ಮಾಡಿದ್ದರು.
Pune Video: Drunken Woman Creates Ruckus At Jagtap Chowk in Wanawadi.#Pune #PuneNews #Wanawadi #drinking pic.twitter.com/wEsaa0BIr9
— Free Press Journal (@fpjindia) February 15, 2025
WATCH | Drunk Daughter of Senior Police Officer Causes Ruckus on New Year’s Eve in Pune’s Wanowrie; Booked by Police👇#Pune #PuneNews #NewYear pic.twitter.com/H1jeW9XRw9
— Free Press Journal (@fpjindia) January 2, 2024