ಮಿತಿಮೀರಿದ ವಾಹನಗಳು ರಸ್ತೆಗಿಳಿಯುವ ಮೂಲಕ ಈಗಾಗಲೇ ಮಹಾನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ. ಜನರು ನಿತ್ಯ ಉಸಿರಾಡುವ ಗಾಳಿ ವಿಷವಾಗಿ ಪರಿಣಮಿಸಿದೆ. ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲೇ ವಿಷಾನಿಲ ಪ್ರದೇಶಗಳು ಹೆಚ್ಚಿವೆ. ಇದರ ನಡುವೆ ಶೋಕಿಗಾಗಿ ಬೈಕ್‌ಗಳ ಸೈಲೆನ್ಸರ್‌ಗಳನ್ನು ಮಾರ್ಪಡಿಸಿಕೊಂಡು ವಿಚಿತ್ರವಾಗಿ ಶಬ್ದ ಮಾಡುತ್ತಾ ತಿರುಗಾಡುವ ಪೋಕರಿಗಳಿಗೆ ಮಹಾರಾಷ್ಟ್ರದ ಪುಣೆಯ ಟ್ರಾಫಿಕ್ ಪೊಲೀಸರು ಚಳಿ ಬಿಡಿಸಿರುವುದು ಭಾರಿ ಸುದ್ದಿಯಾಗಿದೆ.
ಪುಣೆಯ ಪಿಂಪ್ರಿ ಛಿಂಛ್ವಾಡ್ ಪ್ರದೇಶದಲ್ಲಿ ಕಳೆದ 6 ದಿನಗಳಿಂದ ಠಿಕಾಣಿ ಹೂಡಿರುವ ಪೊಲೀಸರು, ಕರ್ಕಶ ಶಬ್ದ ಕೇಳಿಬರುವ ಯಾವುದೇ ಮೋಟಾರ್ ಸೈಕಲ್ ಬಿಟ್ಟಿಲ್ಲ. ಬರೋಬ್ಬರಿ 200 ಬೈಕ್ ಸವಾರರಿಗೆ ದಂಡ ವಿಧಿಸಿದ್ದಾರೆ. ಇಲ್ಲಿನ ಸ್ಥಳೀಯರು ರಾತ್ರಿ ವೇಳೆ ಬೈಕ್‌ಗಳ ಕರ್ಕಶ ತುಂಬಿದ ಶಬ್ದಗಳ ಓಡಾಟದಿಂದ ಸಾಕಾಗಿ ಪೊಲೀಸರಿಗೆ ಹಲವು ದೂರುಗಳನ್ನು ಕೊಟ್ಟಿದ್ದಾರಂತೆ.
BREAKING: ಕೊರೋನಾ ಅಬ್ಬರದ ಹೊತ್ತಲ್ಲೇ ಮತ್ತೊಂದು ಶಾಕ್: ಧಾರವಾಡ 2 ಸೇರಿ ರಾಜ್ಯದಲ್ಲಿ ಮತ್ತೆ 10 ಒಮಿಕ್ರಾನ್ ಕೇಸ್ ಪತ್ತೆ
ದಂಡ ಹೇರಿಕೆ ಆಗಿರುವ ಬೈಕ್ ಸವಾರರ ಪೈಕಿ ಹೆಚ್ಚಿನವರು ರಾಯಲ್ ಎನ್‌ಫೀಲ್ಡ್ ಬೈಕ್ ಮಾಲೀಕರೇ ಆಗಿದ್ದಾರೆ. ಸದ್ಯಕ್ಕೆ ಎಲ್ಲ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಜೋರಾದ ಅಥವಾ ಕರ್ಕಶವಾದ ಸೈಲೆನ್ಸರ್ ಅಳವಡಿಸಿಕೊಂಡು ಸುತ್ತಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಇಂಜಿನ್ ಶಬ್ದವು ಜೋರಾಗಿ ಕೇಳಿಸಬೇಕು, ಎಲ್ಲರೂ ತಮ್ಮತ್ತ ಗಮನಹರಿಸಬೇಕು ಎಂಬ ಭ್ರಾಂತಿಯಲ್ಲಿ ಹುಡುಗರು ಹೆಚ್ಚಿನ ಸಂಖ್ಯೆಯಲ್ಲಿ ಹೀಗೆ ಮಾಡುತ್ತಿದ್ದಾರೆ.
ಕಾನೂನು ಪ್ರಕಾರ 80 ಡೆಸಿಬೆಲ್‌ಗಿಂತಲೂ ಹೆಚ್ಚಿನ ಶಬ್ದವನ್ನು ಬೈಕ್ ಮಾಡುವಂತಿಲ್ಲ. ಹಾಗಾದಲ್ಲಿ ಅದು ಶಬ್ದ ಮಾಲಿನ್ಯ ನಿಯಂತ್ರಣ ಕಾಯಿದೆಯ ಉಲ್ಲಂಘನೆ ಎನಿಸಲಿದೆ.
ಪುಣೆಯಲ್ಲಿ ಟ್ರಾಫಿಕ್ ಪೊಲೀಸರು ನಡೆಸಿರುವ ಬೃಹತ್ ಕಾರ್ಯಾಚರಣೆಯ ವಿಶೇಷತೆ ಎಂದರೆ, ದಂಡ ಹೇರಲಾದ ಬೈಕ್‌ಗಳಿಂದ ಅತಿಯಾಗಿ ಶಬ್ದಮಾಡುವ ಸೈಲೆನ್ಸರ್‌ಗಳನ್ನು ಬಿಚ್ಚಿಕೊಳ್ಳಲಾಗಿದೆ. ಇದನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಬೈಕ್ ಸವಾರರು ಪುನಃ ಅಳವಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸಲ್ಲ.
ಅಲಹಾಬಾದ್ ಹೈಕೋರ್ಟ್‌ನ ಲಖನೌ ವಿಭಾಗೀಯ ಪೀಠವು ಇತ್ತೀಚೆಗೆ ದೇಶೀಯ ಹಾಗೂ ವಿದೇಶಿ ತಯಾರಿಕೆಯ ಬೈಕ್‌ಗಳಲ್ಲಿನ ಸೈಲೆನ್ಸರ್‌ಗಳ ಮಾರ್ಪಡಿಸುವಿಕೆ ಹಾಗೂ ಅದರಿಂದ ಉಂಟಾಗುವ ಶಬ್ದಮಾಲಿನ್ಯದ ವಿರುದ್ಧ ಖಡಕ್ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ.