ಮುಂಬೈ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಪ್ರಾಪ್ತ ಬಾಲಕಿ ಜೀವ ಉಳಿಸಲು ಟ್ರಾಫಿಕ್ ಅನ್ನು ಲೆಕ್ಕಿಸದೇ ಆಕೆಯನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಹಾರಾಷ್ಟ್ರ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಹೌದು, ಮಾನವೀಯತೆ ಮೆರೆದ ಪೊಲೀಸ್ ನಾಯಕ್ ಸಮೀರ್ ಬಾಗ್ಶಿರಾಜ್ ಅವರಿಗೆ ಬಾಲಕಿಯ ಕುಟುಂಬ ಕೃತಜ್ಞತೆ ಸಲ್ಲಿಸಿದ್ದು, ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.
PSI ನೇಮಕಾತಿ ಹಗರಣ: ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಆರೋಗ್ಯದಲ್ಲಿ ಏರುಪೇರು, ಬಂಧಿತರ ಸಂಖ್ಯೆ 17 ಕ್ಕೆ ಏರಿಕೆ
ಪುಣೆ-ಮುಂಬೈ ಹೆದ್ದಾರಿಯ ವಾರ್ಜೆ ಬಳಿ ಈ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುವ ವೇಳೆ ನಿಂತಿದ್ದ ಟ್ರಕ್ ಗೆ ಹಿಂದಿನಿಂದ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದ ನಂತರ ಮುಂದೆ ಇದ್ದ ಟ್ರಕ್ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿ ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿದ್ದರು.
ಹಿಂದಿನ ಸೀಟಿನಲ್ಲಿದ್ದ ಒಬ್ಬ ಹುಡುಗಿ ತೀವ್ರವಾಗಿ ಗಾಯಗೊಂಡಿದ್ದು, ನಾನು ಆಂಬ್ಯುಲೆನ್ಸ್ ಬರುವವರೆಗೆ ಕಾಯದೆ ಹುಡುಗಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಲು ಟ್ರಾಫಿಕ್ ನಡುವೆಯೇ ಓಡಲು ಪ್ರಾರಂಭಿಸಿದೆ. ಹುಡುಗಿಯನ್ನು ಹೊತ್ತೊಯ್ಯುವಾಗ ನಾನು ಓಡುತ್ತಿರುವುದನ್ನು ಕಂಡ ಆಟೋರಿಕ್ಷಾ ಚಾಲಕ ರಾಮ್ ನವಲೆ ತನ್ನ ವಾಹನವನ್ನು ನಿಲ್ಲಿಸಿ ಬರುವಂತೆ ಸೂಚಿಸಿದರು. ತಕ್ಷಣವೇ ಹುಡುಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದೆವು, ನಂತರ ಪೋಷಕರಿಗೆ ಚಿಕಿತ್ಸೆ ಕೊಡಿಸಿದೆವು ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.