ಪತಿಯೊಬ್ಬ ತಾಂತ್ರಿಕನ ಮಾತು ಕೇಳಿ ತನ್ನ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ತಾಕೀತು ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದೆ.
ನಿನ್ನ ಪತ್ನಿ ಜಲಪಾತವೊಂದರ ಬಳಿ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡಿದರೆ ಆಕೆಗೆ ಗಂಡು ಮಗು ಜನಿಸುತ್ತದೆ ಎಂದು ಮೌಲಾನ ಬಾಬಾ ಜಮದಾರ್ ಎಂಬ ತಾಂತ್ರಿಕ ತಿಳಿಸಿದ್ದನೆನ್ನಲಾಗಿದ್ದು, ಹೀಗಾಗಿ ಮಹಿಳೆಯನ್ನು ರಾಯಘಡ ಜಿಲ್ಲೆಗೆ ಕರೆದೊಯ್ಯಲಾಗಿತ್ತು.
ಅಲ್ಲಿ ಪತಿ ಮತ್ತು ಆತನ ಕುಟುಂಬ ಸದಸ್ಯರು ಬೆತ್ತಲೆ ಸ್ನಾನ ಮಾಡುವಂತೆ ಕಿರುಕುಳ ನೀಡಿದ್ದು, ಇದರಿಂದ ಮಹಿಳೆ ಆಘಾತಕ್ಕೊಳಗಾಗಿದ್ದಳು. ಇದೀಗ ಆರೋಪಿಗಳ ವಿರುದ್ಧ ಆಕೆ ಪುನಾದ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ದೂರು ಪಡೆದುಕೊಂಡಿರುವ ಪೊಲೀಸರು ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದು, ತಾಂತ್ರಿಕ ಸೇರಿದಂತೆ ಎಲ್ಲ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.