
ಪುಣೆಯ ಕೊಂಡ್ವಾ ಏರಿಯಾದ ಭಾಗ್ಯೋದಯ ನಗರದಲ್ಲಿ ಭಾನುವಾರ ಸಂಜೆ 5-30 ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ಕಂಬದಿಂದ ತುಂಡಾಗಿದ್ದ ವೈರ್ ಒಂದು ರಸ್ತೆಯ ಮೇಲೆ ನಿಂತಿದ್ದ ನೀರಿನಲ್ಲಿ ಬಿದ್ದಿತ್ತು.
ಇದರ ಅರಿವಿಲ್ಲದೆ 40 ವರ್ಷದ ಮಹಿಳೆ ಕೆಲಸದ ಮೇಲೆ ಹೊರಗೆ ತೆರಳುತ್ತಿದ್ದಾಗ ವಿದ್ಯುತ್ ಹರಿಯುತ್ತಿದ್ದ ನೀರಿನ ಮೇಲೆ ಕಾಲಿಟ್ಟಿದ್ದು, ಇದರ ಪರಿಣಾಮ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸಲು ಕೆಲವರು ಯತ್ನಿಸಿದರಾದರು ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ವಿದ್ಯುತ್ ಇಲಾಖೆ ಈ ಸಂಬಂಧ ತನಿಖೆ ನಡೆಸುವುದಾಗಿ ಘೋಷಿಸಿದ್ದು, ಆದರೆ ಹೋದ ಜೀವ ಮಾತ್ರ ಬರುವುದಿಲ್ಲ ಎಂಬುದು ಕಟು ಸತ್ಯ.