ಮಹಾರಾಷ್ಟ್ರದಲ್ಲಿ ಲಿಫ್ಟ್‌ನಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಪುಣೆಯಿಂದ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮಗುವಿನ ಮೇಲೆ ಕಬ್ಬಿಣದ ಗೇಟ್ ಬಿದ್ದು ಮಗು ಸಾವನ್ನಪ್ಪಿದೆ. ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಕೆಲವು ಮಕ್ಕಳು ಆಟವಾಡುತ್ತಿದ್ದರು. ಆಗ ಮಗುವೊಂದು ಭಾರವಾದ ಕಬ್ಬಿಣದ ಗೇಟನ್ನು ಮುಚ್ಚಲು ಯತ್ನಿಸಿದೆ. ಈ ವೇಳೆ ಬಾಲಕಿ ಮೇಲೆ ಭಾರವಾದ ಕಬ್ಬಿಣದ ಗೇಟ್ ಬಿದ್ದಿದೆ.
ರಸ್ತೆಯಲ್ಲಿ ಕೆಲ ಮಕ್ಕಳು ಆಟವಾಡ್ತಿದ್ದರು. ಅವರು ತಕ್ಷಣ ಹಿರಿಯರಿಗೆ ಮಾಹಿತಿ ತಿಳಿಸಿದ್ದಾರೆ. ಅಲ್ಲಿಗೆ ಬಂದ ಜನರು ಗೇಟ್ ಮೇಲೆತ್ತಿದ್ದಾರೆ. ಆದ್ರೆ ಮಗು ಸಾವನ್ನಪ್ಪಿದೆ. ಸಂಪೂರ್ಣ ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.
ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನ ಬೋಪ್ಖೇಲ್ ಬಳಿಯ ಗಣೇಶನಗರದ ಕಾಲೋನಿ ನಂ. 2 ರಲ್ಲಿ ದುರಂತ ಘಟನೆ ನಡೆದಿದೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ.