alex Certify ದಂಗಾಗಿಸುತ್ತೆ ವಿಚಿತ್ರ ಭ್ರಮೆಯಿಂದ ಬಳಲುತ್ತಿರುವ ವ್ಯಕ್ತಿ ಹೇಳುತ್ತಿರುವ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ವಿಚಿತ್ರ ಭ್ರಮೆಯಿಂದ ಬಳಲುತ್ತಿರುವ ವ್ಯಕ್ತಿ ಹೇಳುತ್ತಿರುವ ಸಂಗತಿ

ಪುಣೆ: ನೀವೆಲ್ಲಾ ಗಲಿವಾರನ ಕಥೆಯನ್ನು ಕೇಳಿರುತ್ತಿರಿ. ಇದೇ ರೀತಿ ಮಹಾರಾಷ್ಟ್ರದ ಪುಣೆಯಲ್ಲಿರುವ ವ್ಯಕ್ತಿಯೊಬ್ಬರ ಮೇಲೆ ಪ್ರತಿದಿನ 200ಕ್ಕೂ ಹೆಚ್ಚು ಮಂದಿ ದಾಳಿ ಮಾಡುತ್ತಾರಂತೆ.

ವಿಚಿತ್ರವೆಂದರೆ ದಾಳಿಕೋರರು ಈತನ ಬೆರಳಣಿಕೆಯಷ್ಟೇ ಉದ್ದವಿದ್ದಾರಂತೆ.
ಹೌದು, 63 ವರ್ಷದ ವ್ಯಕ್ತಿಗೆ ಈ ರೀತಿ ಭ್ರಮೆಗಳು ಹುಟ್ಟುತ್ತಿವೆಯಂತೆ.

ಮೊದಲಿಗೆ ಮನೆಯವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವಂತೆ. ಆದರೆ ಇಂತಹ ಪ್ರಸಂಗ ಹೆಚ್ಚಾಗಿ ಮರುಕಳಿಸಿದಾಗ ಕುಟುಂಬಸ್ಥರು ವೈದ್ಯಕೀಯ ಸಹಾಯ ಪಡೆಯಲು ನಿರ್ಧರಿಸಿದರು.

ಈತನನ್ನು ಪರೀಕ್ಷಿಸಿದ ವೈದ್ಯರು ಲಿಲಿಪುಟಿಯನ್ ಭ್ರಮೆಗಳು ಇರುವುದನ್ನು ಗುರುತಿಸಿದ್ದಾರೆ. ಇದರಲ್ಲಿ ಜನರು ಅಥವಾ ವಸ್ತುಗಳು ಅವುಗಳ ನಿಜವಾದ ಗಾತ್ರಕ್ಕಿಂತ ಚಿಕ್ಕದಾಗಿ ಕಾಣುತ್ತದೆ. ಇದು ರೋಗಿಯು ಭ್ರಮೆ ಎಂದು ತಿಳಿಯದ ವಿಕೃತ ದೃಶ್ಯಗಳನ್ನು ನೋಡುವಂತೆ ಮಾಡುತ್ತದೆಯಂತೆ.

BIG BREAKING: ಇಂದು ಮಧ್ಯಾಹ್ನ 2.15 ಕ್ಕೆ ಪ್ರಮಾಣ ವಚನ: ಇಲ್ಲಿದೆ ಸಂಭವನೀಯ ಸಚಿವರ ಪಟ್ಟಿ

ಇನ್ನು ಈ ಭ್ರಮೆಯ ರೋಗವನ್ನು ಆಲಿಸ್ ಇನ್ ವಂಡರ್ ಲ್ಯಾಂಡ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ವ್ಯಕ್ತಿಯು ದಿನಕ್ಕೆ ಎರಡು ಬಾರಿಯಾದರೂ ಭ್ರಮೆ ಅನುಭವಿಸುತ್ತಿದ್ದ. ಅಲ್ಲದೆ ಜೋರಾಗಿ ಕೂಗಿಕೊಳ್ಳುತ್ತಿದ್ದರಂತೆ. ಇದು ಬಹಳ ಅಪರೂಪದ ಪ್ರಕರಣವಾಗಿದ್ದು, ಒಂದು ಮಿಲಿಯನ್ ಜನರಲ್ಲಿ ಒಬ್ಬರಿಗೆ ಈ ರೋಗ ವಕ್ಕರಿಸುತ್ತದೆಯಂತೆ.

ರೋಗಿಗೆ ಚಿಕಿತ್ಸೆ ನೀಡಿದ ನೋಬಲ್ ಆಸ್ಪತ್ರೆಯ ನರರೋಗ ಮನೋವೈದ್ಯ ಡಾ. ಧರ್ಮೇಂದ್ರ ಕೇಂದ್ರೆ ಪ್ರಕಾರ, ‘’ಲಿಲಿಪುಟಿಯನ್ ಭ್ರಮೆ ಎನ್ನುವುದು ಪ್ರಚೋದನೆಯಿಲ್ಲದ ವಸ್ತುಗಳ ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ಕೊಕೇನ್ ಮತ್ತು ಗಾಂಜಾಗಳಂತಹ ಕೆಲವು ಔಷಧಿಗಳನ್ನು ಸೇವಿಸುವುದರಿಂದ ಇದು ಸಂಭವಿಸಬಹುದು. ಚಯಾಪಚಯ ಅಥವಾ ಎಲೆಕ್ಟ್ರೋಲೈಟ್ ಅಸಮತೋಲನದಿಂದ ಕೂಡ ಈ ಭ್ರಮೆಯುಂಟಾಗಬಹುದು. ಲೋಬ್ ಬ್ರೈನ್ ಟ್ಯೂಮರ್, ಬುದ್ಧಿಮಾಂದ್ಯತೆ ಮತ್ತು ಸ್ಕಿಜೋಫ್ರೇನಿಯಾದ ಜನರಲ್ಲಿ ನಾವು ಇಂತಹ ಪ್ರಕರಣಗಳನ್ನು ನೋಡಬಹುದು’’ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...