ನವದೆಹಲಿ: ಕಾಮದ ಮದದಲ್ಲಿ ಆಟೋದಲ್ಲಿಯೇ ವ್ಯಕ್ತಿಯೊಬ್ಬ ಮಹಿಳೆಯ ಎದುರು ಹಸ್ತಮೈಥುನ ಮಾಡಿಕೊಂಡ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದ ಮಹಿಳೆ ತನ್ನ ಮಗನನ್ನು ಚಿಕಿತ್ಸೆಗಾಗಿ ಯಶವಂತರಾವ್ ಚೌಹಾಣ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲು ಆಟೋರಿಕ್ಷಾ ಹತ್ತಿದ್ದು ಸಹಪ್ರಯಾಣಿಕ ಮಹಿಳೆಯನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಅಸಹ್ಯ ವರ್ತನೆಯಿಂದ ಆಕ್ರೋಶಗೊಂಡ ಮಹಿಳೆಯ ಆಸ್ಪತ್ರೆ ಬಳಿ ಇದ್ದ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳೀಯರ ನೆರವಿನಿಂದ ಆರೋಪಿಯನ್ನು ಬಂಧಿಸಿದ್ದಾರೆ. ಹಸ್ತಮೈಥುನ ಮಾಡಿಕೊಂಡ ಆರೋಪಿಯನ್ನು ಸೋಹೆಬ್ ಖುರೇಷಿ(30) ಎಂದು ಗುರುತಿಸಲಾಗಿದೆ.
ಇದೇ ರೀತಿಯ ಮತ್ತೆರಡು ಘಟನೆಗಳು ವರದಿಯಾಗಿವೆ. ದೆಹಲಿಯ ಸಮೀಪದ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ 40 ವರ್ಷದ ಮಹಿಳೆಯ ಹಿಂದೆ ಹಸ್ತಮೈಥನ ಮಾಡಿಕೊಂಡಿದ್ದಾನೆ.
ಎಂಎಂಜಿ ಜಿಲ್ಲಾ ಆಸ್ಪತ್ರೆಯಲ್ಲಿ ಔಷಧಿ ಪಡೆಯಲು ಮಹಿಳೆ ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಅರ್ಷದ್ ಎಂದು ಗುರುತಿಸಲ್ಪಟ್ಟ ಆರೋಪಿ ಮಹಿಳೆ ಹಿಂದೆ ನಿಂತು ಹಸ್ತಮೈಥುನ ಮಾಡಿಕೊಂಡಿದ್ದಾನೆ. ಕೆಲವರು ಆತನನ್ನು ಗಮನಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ 24 ವರ್ಷದ ಬೈಕ್ ಸವಾರ 21 ವರ್ಷದ ಕಾನೂನು ವಿದ್ಯಾರ್ಥಿನಿಗೆ ಖಾಸಗಿ ಅಂಗ ತೋರಿಸಿದ್ದು, ಆತನನ್ನು ಬಂಧಿಸಲಾಗಿದೆ. ತನ್ನ ಹೆಂಡತಿ ಗರ್ಭಿಣಿಯಾಗಿದ್ದರಿಂದ ಕಳೆದ ಮೂರು ತಿಂಗಳಿಂದ ನಾನು ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಆತ ವಿಚಾರಣೆ ವೇಳೆ ತಿಳಿಸಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.