
ಮುಂಬೈ: ಎನ್.ಸಿ.ಪಿ. ನಾಯಕ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಐಟಿ ಕಂಪನಿ ಉದ್ಯೋಗಿ 34 ವರ್ಷದ ಸಾಗರ್ ಬಾರ್ವಿಯನ್ನು ಬಂಧಿಸಲಾಗಿದೆ.
ಮುಂಬೈ ಪೊಲೀಸರು ಪುಣಿಯಲ್ಲಿ ಸಾಗರ ಬಾರ್ವಿಯನ್ನು ಬಂಧಿಸಿದ್ದಾರೆ. ಶರದ್ ಪವಾರ್ ಅವರಿಗೆ ಸಾಗರ್ ಜೀವ ಬೆದರಿಕೆ ಸಂದೇಶ ಕಳುಹಿಸಿದ್ದ. ವಾಟ್ಸಾಪ್ ಮೂಲಕ ಆರೋಪಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರ ಮೊಬೈಲ್ ಗೆ ಬೆದರಿಕೆ ಸಂದೇಶ ಕಳುಹಿಸಿದ್ದ. ಈ ಸಂಬಂಧ ಮುಂಬೈ ಪೊಲೀಸರಿಗೆ ಸುಪ್ರಿಯಾ ಸುಳೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಪುಣೆಯಲ್ಲಿ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಸಂದೇಶ ಕಳಿಸಿದ್ದ ಸಾಗರ್ ನನ್ನು ಬಂಧಿಸಿದ್ದಾರೆ.