ಪ್ರತಿಯೊಬ್ಬರಿಗೂ ನಗರದಲ್ಲಿ ತಮ್ಮದೇ ಮನೆ ಹೊಂದುವ ಕನಸು ಇರುತ್ತದೆ. ಆದರೆ ಪ್ರತಿಯೊಬ್ಬರಿಂದಲೂ ಇದು ಸಾಧ್ಯವಿಲ್ಲ. ಈ ವಿಷಯದಲ್ಲಿ, ಇಂಥ ಜನರ ನಡುವೆ ಹೊಸತೊಂದನ್ನು ಪ್ರಯತ್ನಿಸುವ ಹಪಾಹಪಿ ಇರುತ್ತದೆ.
ಅಂಥವರಲ್ಲಿ ಒಂದಾದ ಈ ದಂಪತಿ ತಮ್ಮದೇ ಕೈಗಳಿಂದ ಎರಡು ಅಂತಸ್ತಿನ ಮನೆಯೊಂದನ್ನು ಮಣ್ಣಿನಲ್ಲಿ ನಿರ್ಮಾಣ ಮಾಡಿದೆ.
ಪುಣೆಯ ನಿವಾಸಿಗಳಾದ ಯುಗಾ ಅಖಾರೆ ಮತ್ತು ಸಾಗರ್ ಶಿರುಡೆ ಎಂಬ ಈ ದಂಪತಿ ಮಹಾರಾಷ್ಟ್ರದ ವಾಘೇಶ್ವರ್ ಎಂಬ ಗ್ರಾಮದಲ್ಲಿ ಫಾರಂಹೌಸ್ ಒಂದನ್ನು ಕಟ್ಟಿಕೊಳ್ಳಲು ಪ್ಲಾನ್ ಮಾಡಿತ್ತು. ಈ ಮನೆಯನ್ನು ಬಿದಿರು ಹಾಗೂ ಜೇಡಿಮಣ್ಣಿನಲ್ಲಿ ನಿರ್ಮಾಣ ಮಾಡಲು ಈ ಜೋಡಿ ಚಿಂತಿಸಿತ್ತು. ಆದರೆ ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಕಾರಣ ಈ ರೀತಿಯಲ್ಲಿ ಮನೆ ಕಟ್ಟಬೇಡಿ ಎಂದು ಊರಿನ ಮಂದಿ ದಂಪತಿಗೆ ಸಲಹೆ ನೀಡಿತ್ತು.
ತಡರಾತ್ರಿ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕ ಫಿನಿಶ್
ಆದರೂ ಸಹ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಯುಗಾ ಮತ್ತು ಸಾಗರ್, ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಇಂದಿಗೂ ಗಟ್ಟಿಯಾಗಿ ನಿಂತಿರುವ ಹಳೆಯ ಕಾಲದ ಮನೆಗಳನ್ನು ಕಟ್ಟುತ್ತಿದ್ದ ಮಾದರಿಯಲ್ಲಿ ಮನೆ ನಿರ್ಮಾಣ ಮಾಡುವ ಉದಾಹರಣೆಗಳನ್ನು ಜನರ ಮುಂದೆ ಇಡುತ್ತಾ ಸಾಗಿತು.
2014ರಲ್ಲಿ ಪುಣೆಯ ಕಾಲೇಜೊಂದರಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಯುಗಾ ಮತ್ತು ಸಾಗರ್ ಬಳಿಕ ಸಾಗಾ ಅಸೋಸಿಯೇಟ್ಸ್ ಎಂಬ ಸಂಸ್ಥೆ ಹುಟ್ಟು ಹಾಕಿದ್ದಾರೆ. ವಾಸ್ತುಶಿಲ್ಪಿಗಳಾದ ಇಬ್ಬರೂ ಅನೇಕ ಕಟ್ಟಡಗಳಿಗೆ ತಮ್ಮದೇ ಪರಿಶ್ರಮದಿಂದ ವಿನ್ಯಾಸ ರಚಿಸಿದ್ದಾರೆ. ಆದರೆ ಅವರು ನಿರ್ಮಾಣ ಮಾಡಲು ಮುಂದಾದ ಮಣ್ಣಿನ ಮನೆ ವಿಶೇಷವಾದದ್ದು.
’ಮಿಠ್ಠಿ ಮಹಲ್’ ಎಂದು ಹೆಸರಿಡಲಾದ ಈ ಮನೆಯ ನಿರ್ಮಾಣ ವೆಚ್ಚ ಬರೀ ನಾಲ್ಕು ಲಕ್ಷ ರೂಪಾಯಿಗಳಾಗಿವೆ. ಸ್ಥಳೀಯವಾಗಿ ಸಿಗುವ ವಸ್ತುಗಳ ಜೊತೆಗೆ ಇನ್ನಷ್ಟು ವಸ್ತುಗಳನ್ನು ಮರುಬಳಕೆ ಮಾಡಿಕೊಂಡು ಈ ಮನೆ ಕಟ್ಟಿಕೊಂಡಿದ್ದಾರೆ ದಂಪತಿ. ಬಿದಿರು, ಕೆಂಪು ಮಣ್ಣು ಹಾಗೂ ಹುಲ್ಲನ್ನು ಬಳಸಿಕೊಂಡು ಈ ಮನೆ ಕಟ್ಟಿಕೊಂಡಿರುವುದಾಗಿ ದಂಪತಿ ತಿಳಿಸಿದೆ.
ಸ್ಥಳೀಯ ಮಣ್ಣಿನೊಂದಿಗೆ ಸಿಪ್ಪೆ, ಬೆಲ್ಲ ಹಾಗೂ ಸಸ್ಯವೊಂದರ ರಸವನ್ನು ಮಿಶ್ರಣ ಮಾಡಿ, ಜೊತೆಗೆ ಬೇವು, ಹಸುವಿನ ಗಂಜಲ ಮತ್ತು ಸಗಣಿಯನ್ನು ಸೇರಿಸಿ ಮನೆ ಕಟ್ಟಲಾಗಿದೆ. ಇಟ್ಟಿಗೆಗಳನ್ನು ಜೋಡಿಸಿ, ಅವುಗಳಿಗೆ ಈ ಮಣ್ಣು ಹಾಗೂ ಬಿದಿರನ್ನು ಅಂಟಿಸಲಾಗಿದೆ.
ವಿಪರೀತ ಹವಾಮಾನದಿಂದ ಮನೆಯನ್ನು ರಕ್ಷಿಸಲು ಬಾಟಲಿ ಮತ್ತು ಡೋಬ್ ತಂತ್ರಜ್ಞಾನವನ್ನು ಈ ದಂಪತಿ ಬಳಸಿಕೊಂಡಿದೆ. 700 ವರ್ಷಗಳಷ್ಟು ಹಳೆಯದಾದ ಈ ತಂತ್ರಗಾರಿಕೆಯಲ್ಲಿ, ತೇವಗೊಂಡ ಮಣ್ಣಿನೊಂದಿಗೆ ಬಿದಿರು ಅಥವಾ ಇತರೆ ಮರದ ಕಡ್ಡಿಗಳನ್ನು ಒಟ್ಟಿಗೆ ಜೋಡಿಸಿ ಮನೆಯ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತವೆ. ಈ ರೀತಿ ಕಟ್ಟಲಾದ ಮನೆಯ ಗೋಡೆಗಳು ಬೇಸಿಗೆ ಕಾಲದಲ್ಲಿ ಮನೆಯ ಒಳಾಂಗಣವನ್ನು ತಣ್ಣಗಿಟ್ಟರೆ, ಚಳಿಗಾಲದಲ್ಲಿ ಶಾಖ ಹೀರಿಕೊಂಡು ಮನೆಯೊಳಗೆ ಬೆಚ್ಚಗೆ ಇರುವಂತೆ ಮಾಡುತ್ತವೆ.