ಪುಣೆ: ಮದುವೆಯಾಗುವುದಾಗಿ ನಂಬಿಸಿ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ ಎಸಗಿದ್ದಾರೆ ಎಂದು 33 ವರ್ಷದ ಮಹಿಳಾ ಕಾನ್ಸ್ ಟೇಬಲ್ ದೂರು ದಾಖಲಿಸಿದ್ದಾರೆ.
ಮಹಾರಾಷ್ಟ್ರ ಪುಣೆ ಶಿವಾಜಿನಗರ ಠಾಣೆಯಲ್ಲಿ ದೂರು ನೀಡಿರುವ ಮಹಿಳೆ, ಪ್ರಸ್ತುತ ನಾಂದೇಡ್ ನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಆರೋಪಿ ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದು, ಈಗ ವಿವಾಹವಾಗಲು ನಿರಾಕರಿಸಿದ್ದಾರೆ ಎಂದು ಮಹಿಳಾ ಪೊಲೀಸ್ ದೂರು ನೀಡಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಶಿವಾಜಿನಗರ ಪೊಲೀಸರು ನಾಂದೇಡ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಮೋಸ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್ಐ ಬಾಳಾ ಸಾಹೇಬ್ ಕೊಪ್ನರ್ ತಿಳಿಸಿದ್ದಾರೆ.