ಪುಣೆ ಪೊಲೀಸರು ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣ ಬಳಸಿ ಆಗಾಗ್ಗೆ ಗಮನ ಸೆಳೆಯುತ್ತಾರೆ. ಹಾಗೆ ಮಾಡುವಾಗ ಅವರು ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ವೈರಲ್ ಟ್ರೆಂಡ್ ಬಳಸಿಕೊಳ್ಳುವಲ್ಲಿ ಎತ್ತಿದ ಕೈ.
ಇಲಾಖೆಯು ಇತ್ತೀಚೆಗೆ ತಮ್ಮ ಕಾನ್‌ಸ್ಟೆಬಲ್ ಸಾಗರ್ ಘೋರ್ಪಡೆ ಅವರ ವೀಡಿಯೊವನ್ನು ಹಂಚಿಕೊಂಡಿದೆ. ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿ ನಗರದಲ್ಲಿ ನಾಗರಿಕರ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದರೆ, ಅವರು ಅಪರೂಪದ ಗಾಯಕರಾಗಿದ್ದು, ಪುಣೆ ಪೊಲೀಸ್ ಇಲಾಖೆಯು ಜನರ ಮನಸ್ಸಿನಲ್ಲಿ ದೇಶಪ್ರೇಮವನ್ನು ತುಂಬಲು ತನ್ನ ಹವ್ಯಾಸವನ್ನು ಬಳಸಿಕೊಳ್ಳಲು ಈ ಸಿಬ್ಬಂದಿಗೆ ಅವಕಾಶ ಮಾಡಿಕೊಟ್ಟಿತು.
ಪುಣೆ ಶಹಾರ್ ಪೋಲೀಸ್‌ನ ಟ್ವಿಟರ್ ಪುಟವು ಸಾಗರ್ ಘೋಪಡೆ ಹಾಡಿರುವ ದೇಶಭಕ್ತಿಯ ಗೀತೆಯ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊವನ್ನು ಹಂಚಿಕೊಳ್ಳುವಾಗ ಇಲಾಖೆಯು ಮರಾಠಿ ಶೀರ್ಷಿಕೆಯನ್ನು ಸೇರಿಸಿ, “ದೇಶಕ್ಕೆ ಹಾಡನ್ನು ಅರ್ಪಿಸಲು ವಿಶೇಷ ದಿನದ ಅಗತ್ಯವಿಲ್ಲ” ಎಂದು ಹೇಳಿಕೊಂಡಿದೆ.
ಹಾಗೆಯೇ ಇಲಾಖೆಯು “ನಮ್ಮ ಪುಣೆ ಪೊಲೀಸ್ ಕಾನ್ಸ್‌ಟೇಬಲ್ ಸಾಗರ್ ಘೋರ್ಪಡೆ ಅವರು ʼದೇಶ್ ಮೇರೆʼ ಸುಂದರವಾಗಿ ಹಾಡಿದ್ದಾರೆ” ಎಂದು ಪರಿಚಯಿಸಿದೆ. ಹಾಡು ವೀಕ್ಷಿದ ನೆಟ್ಟಿಗರು ಕೊಂಡಾಡಿದ್ದಾರೆ.