ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ವಿವಾಹ ಸಮಾರಂಭದ ಕೋವಿಡ್ – 19 ನಿಯಮ ಉಲ್ಲಂಘಿಸಿದ ಬಿಜೆಪಿ ಮಾಜಿ ಸಂಸತ್ ಸದಸ್ಯ ಧನಂಜಯ್ ಮಹಾದಿಕ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಧನಂಜಯ ಸೇರಿದಂತೆ ಇಬ್ಬರ ಬೆಂಬಲಿಗರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಕೇಸ್ ದಾಖಲಿಸಲಾಗಿದೆ. ಧನಂಜಯ ಅವರ ಮಗನ ಮದುವೆ ಸಮಾರಂಭದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಈ ಮದುವೆಯಲ್ಲಿ ನಿಯಮ ಉಲ್ಲಂಘಿಸಿ 1200 ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.
ಅಂದ ಹಾಗೇ, ಈ ಮದುವೆ ಸಮಾರಂಭದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಮಾಜಿ ಸಿಎಂ ದೇವೆಂದ್ರ ಪಡ್ನವಿಸ್ ಹಾಗೂ ಮಹಾರಾಷ್ಟ್ರ ಶಾಸಕಾಂಗ ಮಂಡಳಿಯ ಪ್ರತಿಪಕ್ಷನಾಯಕ ಪ್ರವೀಣ್ ದಾರೇಕರ್, ಶಿವಸೇನೆ ಮುಖಂಡ ಸಂಜಯ್ ರಾವತ್, ಮೇಯರ್ ಮುರಳಿಧರ ಮೊಹೋಲ್ ಮೊದಲಾದವರು ಭಾಗಿಯಾಗಿದ್ದರು.