
ಮಹಾರಾಷ್ಟ್ರದ ಪುಣೆಯ ಕಲ್ಯಾಣಿ ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದ್ದು, 65 ವರ್ಷದ ತಾರಾ ರಾಜಾರಾಮ್ ಅಗರ್ವಾಲ್ ಮೃತಪಟ್ಟವರಾಗಿದ್ದಾರೆ. ಇವರ ಪಕ್ಕದ ಮನೆ ನಿವಾಸಿ ಪೀಠೋಪಕರಣಗಳನ್ನು ಮಾಡಿಸುತ್ತಿದ್ದು ಈ ಸಂದರ್ಭದಲ್ಲಿ ಧೂಳು ಹಾಗೂ ಹೆಚ್ಚಿನ ಶಬ್ದ ಹೊರ ಹೊಮ್ಮುತ್ತಿತ್ತು ಎನ್ನಲಾಗಿದೆ. ಹೀಗಾಗಿ ತಾರಾ ಅವರ ಪುತ್ರ ಮೊದಲಿಗೆ ಪಕ್ಕದ ಮನೆಯವರ ಜೊತೆ ವಾಗ್ವಾದ ಆರಂಭಿಸಿದ್ದಾರೆ.
ಪುತ್ರನನ್ನು ಬೆಂಬಲಿಸಿ ತಾರಾ ಮತ್ತು ಇತರೆ ಕುಟುಂಬ ಸದಸ್ಯರು ಸಹ ಆಗಮಿಸಿದ್ದು ಈ ಸಂದರ್ಭದಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ತಾರಾ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸನಿಹದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದರು. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೃದಯಾಘಾತವೇ ತಾರಾ ಅವರ ಸಾವಿಗೆ ಕಾರಣವೆಂದು ವೈದ್ಯರು ಘೋಷಿಸಿದ್ದಾರೆ. ಇದೀಗ ಅಗರ್ವಾಲ್ ಕುಟುಂಬ ತಮ್ಮ ನೆರೆಮನೆಯವನ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದೆ.